'IAS ಅಥವಾ ಶಿಕ್ಷಕಿಯಾಗುವ ಮುನ್ನ ಒಳ್ಳೆಯ ಆದರ್ಶ ತಾಯಿಯಾಗಿ': ರಾಜ್ಯಪಾಲೆ ಆನಂದಿಬೆನ್ ಪಟೇಲ್..UP Governor

 UP Governor Anandiben Patel, Expert Mother remark
UP Governor Anandiben Patel, Expert Mother remark
Published on

ಪ್ರಮುಖ ಮುಖ್ಯಾಂಶಗಳು

  • ಮೊದಲು ಆದರ್ಶ ತಾಯಿಯಾಗಿ ಪೋಷಕರಿಗೆ ಆನಂದಿಬೆನ್ ಪಟೇಲ್ ಕಿವಿಮಾತು.
  • ಮಕ್ಕಳು ಶಾಲಾ-ಕಾಲೇಜಿಗೆ ತಲುಪಿದ ಕ್ಷಣ ಜವಾಬ್ದಾರಿ ಮುಗಿತು ಎನ್ನುವುದಲ್ಲ.
  • ಮಕ್ಕಳ ಓಡಾಟ, ಶಿಕ್ಷಣದ ಬಗ್ಗೆ ಗಮನ ಹರಿಸದಿದ್ದರೆ ಅವರ ಭವಿಷ್ಯಕ್ಕೆ ಕುತ್ತಾಗುವ ಸಾಧ್ಯತೆ ಇದೆ.
UP Governor Anandiben Patel, Expert Mother remark: ನೀವು ಐಎಎಸ್ ಅಧಿಕಾರಿಗಳು ಅಥವಾ ಶಿಕ್ಷಕರಾಗಲು ಬಯಸುವ ಮುನ್ನ ಒಬ್ಬ ಆದರ್ಶ ತಾಯಿಯಾಗಿ. ಮನೆಯಲ್ಲಿ ಬೇಯಿಸುವ ಆಹಾರ ಹೇಗೆ ಬೇಯಿಸಬೇಕು ಎನ್ನುವುದು ಎಲ್ಲರಿಗೂ ತಿಳಿದಿರಬೇಕು. ಹೆಣ್ಣುಮಕ್ಕಳು ಮದುವೆಯಾದ ನಂತರ ನಿಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸೋಕೆ ಹೋಗಬಾರದಯ. ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಜ್ಞಾನ ಹಾಗೂ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿದರು.
ಕಾನ್ಪುರದ ಛತ್ರಪತಿ ಶಾಹು ಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ನಡೆದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರ ಜವಾಬ್ದಾರಿ ಮತ್ತು ವ್ಯಕ್ತಿತ್ವ ನಿರ್ಮಾಣ, ಕೌಟುಂಬಿಕ ಮೌಲ್ಯಗಳು, ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಕೊಟ್ಟರು. ಕುಟುಂಬದ ಜವಾಬ್ದಾರಿಗಳನ್ನು ಮುಂದಿಟ್ಟುಕೊಂಡು ವೃತ್ತಿಪರ ಯಶಸ್ಸನ್ನು ಬಲಿಕೊಡಕೂಡದು ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ತಿಳಿ ಹೇಳಿದರು.

ಪೋಷಕರು ಹೀಗಿರಬೇಕು

ನಿಮ್ಮ ಮಕ್ಕಳು ಶಾಲಾ-ಕಾಲೇಜಿನ ಮೆಟ್ಟಿಲು ಹತ್ತಿದ ನಂತರ ಇನ್ನೇನಿದೆ ಜೀವನದಲ್ಲಿ, ಜವಾಬ್ದಾರಿ ಮುಗಿಯಿತು ಎನ್ನುವ ತಾತ್ಸಾರವನ್ನು ಪೋಷಕರು ಬಿಡಬೇಕು. ಮಕ್ಕಳು ಶಿಕ್ಷಣ ಸಂಸ್ಥೆಗಳನ್ನು ಪ್ರವೇಶಿಸಿದ ನಂತರ ಏನು ಮಾಡುತ್ತಿದ್ದಾರೆ. ಎಲ್ಲಿಗೆ ಹೋಗುತ್ತಿದ್ದಾರೆ. ಅವರ ಓದು ಹೇಗಾಗುತ್ತಿದೆ ಎಂಬ ಎಲ್ಲ ವಿಚಾರಗಳು ಪಿನ್​ ಟು ಪಿನ್​ ಪೋಷಕರಿಗೆ ತಿಳಿದಿರಬೇಕು. ಮಕ್ಕಳ ಮೇಲ್ವಿಚಾರಣೆಯಲ್ಲಿ ಸಣ್ಣ ಲೋಪವಾದರೂ ಅದು ಅವರ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಸಲಹೆ ಕೊಟ್ಟರು.

ಮಾದಕ ದ್ರವ್ಯ ದಂಧೆ ನಿರ್ಮೂಲನೆಯಾಗ್ಲಿ

ದೇಶದಲ್ಲಿ ಒಂದು ಕಡೆ ಪದವಿ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದು ಕಡೆ ಮಾದಕ ದ್ರವ್ಯ ಮಾರಾಟದಂತಹ ದಂಧೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಅಪರಾಧ ಮುಂದುವರೆದರೆ ನಮ್ಮ ನೈಜ ಸ್ಥಿತಿ ಶಿಕ್ಷಣವನ್ನು ಪ್ರತಿಬಿಂಬಿಸುತ್ತದೆ. ಶೈಕ್ಷಣಿಕ ಜ್ಞಾನದಷ್ಟೇ ನೈತಿಕ ಮೌಲ್ಯಗಳೂ ಮುಖ್ಯ ಎಂದು ಹೇಳಿದರು. ಆ ಮೂಲಕ ವಿಶ್ವ ವಿದ್ಯಾನಿಲಯಗಳ ಹಾಸ್ಟೆಲ್​ ಸುತ್ತಮುತ್ತ ಮಾದಕ ದ್ರವ್ಯ ದಂಧೆ ನಡೆಯುತ್ತಿರುವ ಬಗ್ಗೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದರು.

ಗರ್ಭ ಸಂಸ್ಕಾರ ಕೋರ್ಸ್​​​ ಬಗ್ಗೆ ಸಲಹೆ

ತಾಯಿಯ ಪೋಷಣೆ, ಭ್ರೂಣದ ಬೆಳವಣಿಗೆ ಹಾಗೂ ಆರೋಗ್ಯಕರ ಗರ್ಭಧಾರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು 'ಗರ್ಭ ಸಂಸ್ಕಾರ' ಕೋರ್ಸ್‌ಗಳನ್ನು ಪರಿಚಯಿಸಲು ಅವರು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದರು. ಬಾಲ್ಯವಿವಾಹ ಮತ್ತು ಗಂಡು-ಹೆಣ್ಣು ಮಕ್ಕಳ ನಡುವಿನ ತಾರತಮ್ಯದ ವಿರುದ್ಧ ಪ್ರಚಾರ ನಡೆಸುವಂತೆಯೂ ಕರೆ ನೀಡಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net