ಇನ್ನು, ಜುಲೈ 25ರಂದು ಸಿವಾನ್‌ನಲ್ಲಿ ನಡೆದ ಧರಣಿ ವೇಳೆ ಜಿಲ್ಲಾ ಗುಪ್ತಚರ ಘಟಕದ (DIU) ಕಾನ್‌ಸ್ಟೆಬಲ್ ಎಕೆ-47ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಕಾನ್‌ಸ್ಟೆಬಲ್ ಪ್ರತಿಭಟಗಾರರ ಗುಂಪಿನಲ್ಲಿ ಸಿಲುಕಿದ್ದರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ವಾದ ಮಂಡಿಸಿದ್ದಾರೆ.