

ನವದೆಹಲಿ: ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಬ್ರಿಟಿಷ್ ಕಾಲದ ಐಕಾನಿಕ್ ಆಡಳಿತ ಕಟ್ಟಡದಲ್ಲಿ ಸೋಮವಾರ(ಅ. 26) ಅಗ್ನಿ ಅವಘಡ ಸಂಭವಿಸಿದ್ದು, ಕಾರ್ಮಿಕರು ಬೆಂಕಿಯನ್ನು ನಂದಿಸಿದ್ದಾರೆ ಎಂದು ವರದಿಯಾಗಿದೆ. ಈ ಕಟ್ಟಡಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಕಚೇರಿಗಳಿವೆ.
ಪೊಲೀಸರ ಪ್ರಕಾರ, ಬೆಳಗ್ಗೆ ಕಟ್ಟಡದಿಂದ ದಡ್ಡ ಹೊಗೆ ಬರುತ್ತಿರುವುದು ಕಂಡು ಬಂದಿದೆ. ಕಟ್ಟಡದ ಮೇಲ್ಛಾವಣಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು ಮತ್ತು ಅಲ್ಲಿ ಕಾರ್ಮಿಕರು ಇದ್ದರು. ಮೇಲ್ಛಾವಣಿಯಲ್ಲಿದ್ದ ಹಳೆಯ ಪ್ಲಾಸ್ಟಿಕ್ ನೀರಿನ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಮಿಕರು ಅದನ್ನು ನಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಸಹ ವರದಿ ಮಾಡಿದ್ದು, ದೆಹಲಿ ಅಗ್ನಿಶಾಮಕ ಸೇವೆಗೆ ಬೆಳಿಗ್ಗೆ 11.10ಕ್ಕೆ ಹೊಗೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದ ಬಳಿಕ, ಆರು ಅಗ್ನಿಶಾಮಕ ವಾಹನಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಯಿತು. ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಹೇಳಿದೆ.
ರಾಜ್ಯಸಭಾ ಸಂಸದ ಮಿಲಿಂದ್ ದಿಯೋರಾ ಸಹ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸಂಸತ್ತಿಗೆ ಹೋಗುವ ದಾರಿಯಲ್ಲಿ, ನಾರ್ತ್ ಬ್ಲಾಕ್‌ನ ಹಿಂಭಾಗದಿಂದ ದಟ್ಟವಾದ ಹೊಗೆ ಏಳುತ್ತಿರುವುದನ್ನು ಗಮನಿಸಿದೆ. ಬಹುಶಃ ಅಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ತೋರುತ್ತದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ. ತುರ್ತು ಸೇವೆಗಳು ತ್ವರಿತವಾಗಿ ಸ್ಪಂದಿಸುತ್ತಿವೆ ಎಂದು ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್).