ಕೂಡಲೇ ಪರಿಹಾರ ಕಂಡುಕೊಳ್ಳಿ: ದೆಹಲಿಯಲ್ಲಿ ಮೆಟ್ರೋ ಸೇವೆ ಬಂದ್​: ವಕೀಲರಿಗೆ ತಟ್ಟಿದ NEET ಹೋರಾಟದ ಬಿಸಿ; ಮೆಟ್ರೋ ಆಡಳಿತಕ್ಕೆ ಸಿಜೆಐ ವಾರ್ನಿಂಗ್​​! CJI on Delhi Metro

ವಕೀಲರ ಪರದಾಟಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಎಚ್ಚರಿಕೆ
ವಕೀಲರ ಪರದಾಟಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಎಚ್ಚರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ನೀಟ್ ಪ್ರತಿಭಟನೆ ಹಿನ್ನೆಲೆ 16 ಮೆಟ್ರೋ ನಿಲ್ದಾಣಗಳು ಬಂದ್!
  • ವಕೀಲರ ಪರದಾಟಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಎಚ್ಚರಿಕೆ
  • ಕೂಡಲೇ ಪರಿಹಾರ ಕಂಡುಕೊಳ್ಳಿ; ಇಲ್ಲ ನಾವು ಮದ್ಯ ಪ್ರವೇಶ ಮಾಡುತ್ತೇವೆ: ಸಿಜೆಐ ಎಚ್ಚರಿಕೆ
ನವದೆಹಲಿ: ಕಳೆದೆರಡು ದಿನಗಳಿಂದ ನೀಟ್​ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮವನ್ನು ವಿರೋಧಿಸಿ, ದೆಹಲಿಯಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಸೋಮವಾರ (ಜು.20) ನಡೆದ ಬೃಹತ್​ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನಲೆ ನಿನ್ನೆ (ಬುಧವಾರ, ಜು.22) ಯಿಂದ ಸುಮಾರು 16 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಗಳನ್ನು ನಿರ್ಬಂಧಿಸಲಾಗಿದೆ.
ಈ ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ ಹೇರಿರುವ ಹಿನ್ನಲೆ ವಕೀಲರಿಗೆ ಹಾಗೂ ನ್ಯಾಯಾಲಯದಲ್ಲಿ ಕೆಲಸ ಮಾಡುವವರು ತೊಂದರೆ ಎದುರಿಸುತ್ತಿರುವ ಕಾರಣ ಸುಪ್ರೀಂ ಕೋರ್ಟ್​ ಈ ಪ್ರಕರಣದಲ್ಲಿ ಮದ್ಯ ಪ್ರವೇಶ ಮಾಡಲಿದೆ ಎಂದು ಸಿಜೆಐ ಸೂರ್ಯ ಕಾಂತ್​ (CJI on Delhi Metro) ಮೆಟ್ರೋ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೂಡಲೇ ಪರಿಹಾರ ಕಂಡುಕೊಳ್ಳಿ: ಸಿಜೆಐ ಎಚ್ಚರಿಕೆ!

ದೆಹಲಿಯಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯಿಂದ ದೆಹಲಿಯಲ್ಲಿ ಮೆಟ್ರೋ ಸೇವೆಗಳಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಇದರಿಂದ ವಕೀಲರಿಗೆ ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಶನ್​, ಮುಖ್ಯ ನ್ಯಾಯಮೂರ್ತಿಗಳ ಎದುರಿಗೆ ಮನವಿ ಮಾಡಿದೆ.
ಈ ಮನವಿಯನ್ನು ಸ್ವೀಕರಿಸಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಾ ಕಾಂತ್​, ಮಧ್ಯಾಹ್ನ ಊಟದ ವಿರಾಮ ಮುಗಿಯುವವರೆಗೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಇಲ್ಲದಿದ್ದರೆ, ನ್ಯಾಯಪೀಠ ಈ ವಿಚಾರದಲ್ಲಿ ಮದ್ಯ ಪ್ರವೇಶಿಸುತ್ತದೆ ಎಂದು ಮೆಟ್ರೋ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಆಸ್ತಿ ನಾಶ ಹಿನ್ನಲೆ ಈ ಕ್ರಮ!

ಸೋಮವಾರ (ಜು.20) ದೆಹಲಿಯಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಪ್ರತಿಭಟನಾಕಾರರು ನೂರಾರು ಕಡೆಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ನಾಶ ಪಡಿಸಿದ ಹಿನ್ನಲೆ ಲೋಕ ಕಲ್ಯಾಣ್​ ಮಾರ್ಗದಿಂದ ಶಿವಾಜಿ ಸ್ಟೇಡಿಯಂ ವರೆಗಿನ 16 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ದೆಹಲಿ ಮೆಟ್ರೋ ಆಡಳಿತ ತಿಳಿಸಿದೆ.
ಪ್ರತಿಭಟನೆಗೆ ಸೇರುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರು ಹಿನ್ನಲೆ ಮೆಟ್ರೋ ನಿಲ್ದಾಣಗಳ ರಕ್ಷಣೆಗಾಗಿ, ಕೇಂದ್ರ ಮೀಸಲು ಪಡೆ ಹಾಗೂ ತ್ವರಿತ ಕಾರ್ಯ ಪಡೆ (RAF) ಗಳನ್ನು ಸೇವೆ ನಿಲ್ಲಿಸಿರುವ ಮೆಟ್ರೋ ನಿಲ್ದಾಣಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net