ಕೇಂದ್ರೀಯ ಕೆವೈಸಿ (CKYC 2.0) ವ್ಯವಸ್ಥೆಯು ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಹೀಗಾಗಿ, ಬ್ಯಾಂಕ್‌ಗಳು, ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಹೊಸ ಖಾತೆಗಳನ್ನು ತೆರೆಯುವಾಗ ಅಥವಾ ಹೊಸ ಹೂಡಿಕೆಗಳನ್ನು ಮಾಡುವಾಗ ಪದೇ ಪದೇ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಒಮ್ಮೆ ನೋಂದಾಯಿಸಿದ ನಂತರ, ವಿವರಗಳನ್ನು ಇತರ ಉದ್ದೇಶಗಳಿಗಾಗಿ ಸುಲಭವಾಗಿ ಬಳಸಬಹುದು.