ಫೈಲ್ ಕ್ಲಿಯರ್ ಮಾಡಲು 10 ಲಕ್ಷ ರೂಪಾಯಿ ಲಂಚ: ಸಿಬಿಐ ಬಲೆಗೆ ಬಿದ್ದ ಕೇಂದ್ರ ಹಣಕಾಸು ಸಲಹೆಗಾರ! IB Ministry
IB Ministry ಸಾಂದರ್ಭಿಕ ಚಿತ್ರ
Published on:
Copied
Follow Us
IB Ministry:
ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ (I&B Ministry) ಆಂತರಿಕ ಹಣಕಾಸು ಸಲಹೆಗಾರರಾಗಿ (IFA) ಕರ್ತವ್ಯ ನಿರ್ವಹಿಸುತ್ತಿದ್ದ ಡೆಪ್ಯುಟಿ ಕಂಟ್ರೋಲರ್ ಆಫ್ ಅಕೌಂಟ್ಸ್ ಅಧಿಕಾರಿಯನ್ನು ಸಿಬಿಐ (CBI) ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆ ಬಂಧಿಸಿದ್ದಾರೆ.
ಖಾಸಗಿ ಕಂಪನಿಯೊಂದರ ಒಪ್ಪಂದ ನವೀಕರಣ ಫೈಲ್ನ್ನು ಬೇಗನೆ ವಿಲೇವಾರಿ ಮಾಡಲು ತನ್ನ ಹೆಂಡತಿಯಿಂದ 10 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಈ ಕಾರ್ಯಾಚರಣೆ ಬೆಳಕಿಗೆ ಬಂದಿದೆ.
ಬಂಧಿತ ಅಧಿಕಾರಿಯನ್ನು 2020ರ ಬ್ಯಾಚ್‌ನ ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವಿಸ್ (ICAS) ಅಧಿಕಾರಿ ಸಂಸದೀಯ ದರ್ಜೆಯ ಸಂದೀಪ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯ ಕಾಂಟ್ರಾಕ್ಟ್ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇವರು ಉದ್ಯಮಿಯೊಬ್ಬರಿಂದ ಆರಂಭದಲ್ಲಿ 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಸಿಬಿಐ ವಕ್ತಾರರು ನೀಡಿರುವ ಹೇಳಿಕೆಯಂತೆ, ಸಂಧಾನದ ನಂತರ, ತಮ್ಮ ಬಳಿ ಬಾಕಿ ಇದ್ದ ಖಾಸಗಿ ಸಂಸ್ಥೆಯ ನವೀಕರಣ ಫೈಲ್ ಅನ್ನು ತ್ವರಿತವಾಗಿ ಕ್ಲಿಯರ್ ಮಾಡಲು ಆರೋಪಿಯು 10 ಲಕ್ಷ ರೂಪಾಯಿ ಲಂಚ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಮಂಗಳವಾರ ರಹಸ್ಯ ಕಾರ್ಯಾಚರಣೆ ನಡೆಸಿದ ಸಿಬಿಐ ತಂಡ, ಅಧಿಕಾರಿಯು ತಮ್ಮ ಪತ್ನಿಯ ಮೂಲಕ 10 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ಸಿಬಿಐ ಹೆಚ್ಚಿನ ತನಿಖೆಯನ್ನು ಮುಂದುವರೆಸಿದೆ (ಏಜೆನ್ಸೀಸ್).