ಜಾರ್ಖಂಡ್​​ನಲ್ಲಿ ತೀವ್ರಗೊಂಡ ಹೋರಾಟ: ಸಿಎಂ ಜೊತೆ ಮಾತ್ರ ಮಾತುಕತೆ; ಸರ್ಕಾರಕ್ಕೆ ದೇವೇಂದ್ರ ಮಹ್ತೊ ಎಚ್ಚರಿಕೆ! Devendra Mahto

ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಜೊತೆ ಮಾತ್ರ ಮಾತುಕತೆ
ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಜೊತೆ ಮಾತ್ರ ಮಾತುಕತೆ
Published on

ಪ್ರಮುಖ ಮುಖ್ಯಾಂಶಗಳು

  • ಜಾರ್ಖಂಡ್‌ನಲ್ಲಿ ತೀವ್ರಗೊಂಡ ಹೋರಾಟ
  • ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಜೊತೆ ಮಾತ್ರ ಮಾತುಕತೆ
  • ಸರ್ಕಾರಕ್ಕೆ ವಿದ್ಯಾರ್ಥಿ ನಾಯಕ ದೇವೇಂದ್ರ ಮಹ್ತೊ ಎಚ್ಚರಿಕೆ
ಜಾರ್ಖಂಡ್​: ಕಳೆದ 17 ದಿನಗಳಿಂದ ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ, ಜಾರ್ಖಂಡ್​ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ (ಆ.10) ಈ ಹೋರಾಟ ಇನ್ನಷ್ಟು ತೀವ್ರವಾಗಿದ್ದು, ವಿಧಾನಸಭೆ ಮುತ್ತಿಗೆಗೆ ಪ್ರತಿಭಟನಾಕಾರರು ಮುಂದಾಗಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ವಿದ್ಯಾರ್ಥಿ ನಾಯಕ, ದೇವೇಂದ್ರ ಮಹ್ತೊ (Devendra Mahto), ನಮ್ಮ ಬೇಡಿಕೆ ಇಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಜೊತೆ ಮಾತುಕತೆ!

ಇದೇ ಸಮಯದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದೇವೇಂದ್ರ ಮಹ್ತೊ, ನಾವು ಇನ್ಮುಂದೆ ಸರ್ಕಾರದ ಯಾವುದೇ ನಿಯೋಗದ ಜೊತೆಗೆ ಮಾತುಕತೆ ನಡೆಸುವುದಿಲ್ಲ, ಮಾತುಕತೆ ನಡೆದರೆ ಅದು ಸಿಎಂ ಹೇಮಂತ್​ ಸೊರೆನ್​ ಜೊತೆಗೆ ಮಾತ್ರ ಎಂದು ಹೇಳಿದ್ದಾರೆ.

ನಮ್ಮ ಬೇಡಿಕೆಯಂತೆ, ಜೆಪಿಎಸ್​​ಸಿ, ಜೆಎಸ್​ಎಸ್​ಸಿ ಇವುಗಳನ್ನು ರದ್ದು ಮಾಡಬೇಕು, ಹಾಗೆಯೇ ಇವುಗಳು ನಡೆಸಿದ್ದ ಪರೀಕ್ಷೆಗಳು ಇನ್ನೊಮ್ಮೆ ನಡೆಯಬೇಕು. ಪರೀಕ್ಷಾ ಅಕ್ರಮಗಳ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೆನೆಂದು ಹೇಳಿದ್ದಾರೆ.


ಲಾಠಿ ಚಾರ್ಜ್​, ಅಶ್ರುವಾಯು!

ಸೋಮವಾರ ಜಾರ್ಖಂಡ್​ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಹೋರಾಟಗಾರರು ವಿಧಾನಸಭೆ ಮುತ್ತಿಗೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು, ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್​, ಅಶ್ರುವಾಯು ಹಾಗೂ ಜಲ ಫಿರಂಗಿಯನ್ನು ಬಳಕೆ ಮಾಡಿದ್ದಾಗಿ ವರದಿಯಾಗಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net