ಕೋಲ್ಕತ್ತಾದ ಎಸ್ಪ್ಲನೇಡ್ನ ವೈ-ಚಾನೆಲ್ ವೃತ್ತದಲ್ಲಿ ಮಮತಾ ತಮ್ಮ ನೂರಾರು ಬೆಂಬಲಿಗರೊಂದಿಗೆ ಧರಣಿ ಕುಳಿತಿದ್ದಾರೆ. ಟಿಎಂಸಿ ಮೂಲಗಳ ಪ್ರಕಾರ, ಮೊದಲು ರಾಣಿ ರಾಶ್ಮೋನಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಲಾಗಿತ್ತು. ಆದರೆ, ಕೋಲ್ಕತ್ತಾ ಪೊಲೀಸರು ಭದ್ರತೆಯ ನೆಪವೊಡ್ಡಿ ಇಡೀ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಮಮತಾ ಬ್ಯಾನರ್ಜಿ, ರಸ್ತೆ ಮಧ್ಯದಲ್ಲೇ ಕುಳಿತು, ನಾನು ಬಂಗಾಳದ ಜನರಿಗಾಗಿ ಹೋರಾಡುತ್ತೇನೆ ಇಲ್ಲವೇ ಸಾಯುತ್ತೇನೆ ಎಂದು ಘೋಷಣೆಗಳನ್ನು ಕೂಗುತ್ತಾ ಮೈದಾನಕ್ಕಿಳಿದಿದ್ದಾರೆ.