ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್; ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು..Central Government

ವಿಜಯವಾಣಿ (94)
Published on: 
  • ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗುಡ್​ನ್ಯೂಸ್.

  • ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಡಿಎ ಹೆಚ್ಚಳ.

  • ಶೇ.3ಕ್ಕೆ ತುಟ್ಟಿ ಭತ್ಯೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ .

ನವ ದೆಹಲಿ: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಶೇ.3ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.

ಶೇ.3ಕ್ಕೆ ತುಟ್ಟಿ ಭತ್ಯೆ ಹೆಚ್ಚಳ

2026 ಜನವರಿ 1ರಿಂದ ಅನ್ವಯವಾಗುವಂತೆ, ಏಪ್ರಿಲ್​ನಲ್ಲಿ ಕೇಂದ್ರ ಸರ್ಕಾರಿ ಮತ್ತು ಪಿಂಚಣಿ ದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಶೇ.2ರಷ್ಟು ಹೆಚ್ಚಳಕ್ಕೆ ಅನುಮೋದನೆ ಕೊಟ್ಟಿತ್ತು. ಆನಂತರ ನೀಡಿದ ಇತ್ತೀಚಿನ ತುಟ್ಟಿ ಭತ್ಯೆ ಹೆಚ್ಚಳ ಇದಾಗಿದೆ. ಇದರ ಪ್ರಕಾರ ಮೂಲ ವೇತನ ಶೇ.60 ಸಿಗಲಿದೆ.

Also Read
ಸರ್ಕಾರಿ ನೌಕರರಿಗೆ ಬಂಪರ್​ ಗಿಫ್ಟ್​: ಶೇ.3 ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಿದ ಕೇಂದ್ರ | Hikes
ವಿಜಯವಾಣಿ (94)

ತುಟ್ಟಿ ಭತ್ಯೆ ಹೆಚ್ಚಳ ಯಾಕೆ?

ಹಣದುಬ್ಬರ ಸಮಸ್ಯೆ ಮತ್ತು ಅಗತ್ಯ ವಸ್ತುಗಳ ಖರೀದಿ ಶಕ್ತಿಯನ್ನು ಹೆಚ್ಚಿಸಲು ಸರ್ಕಾರವು ವರ್ಷಕ್ಕೆ ಎರಡು ಬಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಹೆಚ್ಚಿಸುತ್ತದೆ.

ಮೂಲ ವೇತನದ ಮೇಲೆ ನೀಡಲಾಗುವ ನಿರ್ದಿಷ್ಟ ಪ್ರಮಾಣದ ಹಣಕಾಸಿನ ಭತ್ಯೆಯಾಗಿದೆ. ದಿನಸಿ, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ನೌಕಕರ ಆದಾಯ ಕಡಿಮೆಯಾಗಬಾರದು ಎನ್ನುವ ಕಾರಣಕ್ಕೆ ಕಾಲ ಕಾಲಕ್ಕೆ ತುಟ್ಟಿ ಭತ್ಯೆ ಪರಿಷ್ಕರಿಸಲಾಗುತ್ತದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net