ಕೆಲ ವರ್ಷಗಳ ಬಳಿಕ, ನಟಿ ತಮ್ಮ ಈ ದೃಶ್ಯದ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದ್ದರು. ಸಂದರ್ಶನವೊಂದರಲ್ಲಿ ನನ್ನ ಸಿನಿ ಪಯಣದತ್ತ ಒಮ್ಮೆ ಕಣ್ಣು ಹಾಯಿಸಿದಾಗ, ದಯಾವನ್ ಚಿತ್ರದ ಕಲ್ಪನೆ ಬರುತ್ತದೆ. ಆದರೆ ನಾನು ಅಂದು ಮಾಡಿದ್ದು ಸರಿ ಇರಲಿಲ್ಲ ಎನಿಸುತ್ತಿದೆ. ನಾನು ನಿರಾಕರಿಸಬೇಕಿತ್ತು. ನಾನು ಆ ದೃಶ್ಯದಲ್ಲಿ ನಟಿಸಬಾರದಿತ್ತು. ಅದು ಮುಖ್ಯವಲ್ಲದಿದ್ದರೂ, ಅವರು ಆ ದೃಶ್ಯವನ್ನು ಹಾಕಿದ್ದಾರೆಂದು ತೋರುತ್ತದೆ. ನಾನು ಅದಕ್ಕೆ ಇಲ್ಲ ಎಂದು ಹೇಳಬೇಕಿತ್ತು ಎಂದು ಈ ಹಿಂದೆ ಹೇಳಿದ್ದರು ಎಂದು ವರದಿಯಾಗಿತ್ತು.