ಇದೇ ಸೆಪ್ಟೆಂಬರ್ನಿಂದ ಇದು ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ. ಮಲೇಷ್ಯಾ ಕೂಡ ಘೊಷಣೆ ಮಾಡಿದ್ದು, ವರ್ಷಾಂತ್ಯದೊಳಗೆ ಜಾರಿಗೆ ತರಲು ಯೋಜಿಸಿದೆ. ಡೆನ್ಮಾರ್ಕ್ನಲ್ಲಿ ಈ ನಿಯಮ ಜೂನ್ ವೇಳೆಗೆ ಜಾರಿಯಾಗಬಹುದು. ಗ್ರೀಸ್ ಮತ್ತು ಸ್ಪೇನ್ನಲ್ಲಿ ಈ ಕುರಿತ ಚರ್ಚೆ ಅಂತಿಮ ಹಂತದಲ್ಲಿದೆ. ಪೋರ್ಚುಗಲ್ 16 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯಗೊಳಿಸಿದ್ದು, 13 ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ನಿಷೇಧ ಹೇರಿದೆ. ಅಮೆರಿಕದಲ್ಲಿ ರಾಷ್ಟ್ರಮಟ್ಟದ ನಿಷೇಧವಿಲ್ಲದಿದ್ದರೂ, ಫ್ಲೋರಿಡಾ, ಓಹಿಯೋ, ಉತಾಹ್ನಂತಹ ರಾಜ್ಯಗಳು 14ರಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿವೆ. ಭಾರತದಲ್ಲಿ, ಆಂಧ್ರಪ್ರದೇಶ ಸರ್ಕಾರ 13 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧಿಸಲು ಮುಂದಿನ 90 ದಿನಗಳೊಳಗೆ ಮಾರ್ಗಸೂಚಿ ಹೊರತರುವುದಾಗಿ ತಿಳಿಸಿದೆ. ಗೋವಾ ಸರ್ಕಾರವೂ ಈ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದೆ.