ನರ್ಗಿಸ್ ಫಕ್ರಿ ಮೂಲತಃ ಅಮೆರಿಕದಲ್ಲಿ ಜನಿಸಿದ ಭಾರತೀಯಳಾಗಿದ್ದು, ಪ್ರಾರಂಭದಲ್ಲಿ ಮಾಡೆಲಿಂಗ್ನಲ್ಲಿ ತೊಡಗಿದ್ದ ನರ್ಗಿಸ್, 2011 ರಲ್ಲಿ ರಣಬೀರ್ ಕಪೂರ್ ನಟನೆಯ ರಾಕ್‌ಸ್ಟಾರ್ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ನಂತರ ಇವರು ಮದ್ರಾಸ್ ಕೆಫೆ, ಮೈನ್ ತೇರಾ ಹೀರೋ, ಹೌಸ್‌ಫುಲ್ 5 ಮತ್ತು ಅಜರ್ ಸಿನಿಮಾದಲ್ಲಿ ನಟಿಸಿದ್ದಾರೆ. ನರ್ಗಿಸ್ ನಟನೆಯ ಜೊತೆಗೆ ಯೋಗ ಮತ್ತು ಉತ್ತಮ ಜೀವನಶೈಲಿಗೂ ಮಹತ್ವ ನೀಡುವವರಾಗಿದ್ದು, ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಮಾಹಿತಿಯುಕ್ತ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ,(ಏಜನ್ಸೀಸ್).