ಬಿಷ್ಣೋಯ್ ಗ್ಯಾಂಗ್ ಭೀತಿ: ಟೈಗರ್ ಶ್ರಾಫ್ ಮೇಲೆ ಶೂಟೌಟ್ ಬೆನ್ನಲ್ಲೇ ಸಲ್ಮಾನ್ ಹೈ-ಅಲರ್ಟ್; ಅತ್ಯಾಧುನಿಕ ಗನ್‌ಗಳೊಂದಿಗೆ ಏರ್‌ಪೋರ್ಟ್‌ಗೆ ಬಂದಿಳಿದ ‘ಭಾಯಿಜಾನ್’! Salman Khan

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ಭದ್ರತೆ ಬಿಗಿಗೊಳಿಸಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭೀತಿ ನಡುವೆ ಅತ್ಯಾಧುನಿಕ ಬಂದೂಕುಗಳ ಕಾವಲಿನಲ್ಲಿ ನಟ ಏರ್‌ಪೋರ್ಟ್‌ಗೆ ಆಗಮಿಸಿದ್ದಾರೆ.
ಮುಂಬೈ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಹಾಗೂ ಅತ್ಯಾಧುನಿಕ ಬಂದೂಕು ಹಿಡಿದ ಅಂಗರಕ್ಷಕರೊಂದಿಗೆ ನಟ ಸಲ್ಮಾನ್ ಖಾನ್
ಮುಂಬೈ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಹಾಗೂ ಅತ್ಯಾಧುನಿಕ ಬಂದೂಕು ಹಿಡಿದ ಅಂಗರಕ್ಷಕರೊಂದಿಗೆ ನಟ ಸಲ್ಮಾನ್ ಖಾನ್Actor Salman Khan at Mumbai Airport, accompanied by tight security and bodyguards armed with state-of-the-art weapons.
Published on: 

ಮುಂಬೈ: ಬಾಲಿವುಡ್​ ನಟ, ಆಕ್ಷನ್​ ಹೀರೋ ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಈಗ ನಟ ಸಲ್ಮಾನ್​ ಖಾನ್​ ಅವರ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಟೈಗರ್​ ಮೇಲೆ ಶೂಟೌಟ್​ ನಡೆದು ಮೂರು ದಿನ ಕಳೆದ ನಂತರ ಸಲ್ಮಾನ್​ ಮೊದಲ ಬಾರಿಗೆ ಮನೆಯಿಂದ ಆಚೆ ಬಿದ್ದಿದ್ದು, ಈ ಸಮಯದಲ್ಲಿ ಅವರ ಅಂಗರಕ್ಷಕರು ಎಂಪಿ 5, ಎಸ್​ಡಿ 6 ಮಾದರಿಯ ಅತ್ಯಾಧುನಿಕ ಬಂದೂಕುಗಳನ್ನು ಹಿಡಿದಿರುವುದು ಕಂಡುಬಂದಿದೆ. ಈ ಹಿನ್ನಲೆ, ಲಾರೆನ್ಸ್​​ ಬಿಷ್ಣೋಯ್​ ಗ್ಯಾಂಗ್​ನ ಬೆದರಿಕೆಗೆ ನಟ ಸಲ್ಮಾನ್​ ಖಾನ್​​ ಅವರಲ್ಲಿ ಭೀತಿಯನ್ನು ಹುಟ್ಟಿಸಿದೆ ಎಂದು ಖಾತರಿ ಪಡೆಸಿದೆ.

ಏರ್​ಪೋರ್ಟ್​ಗೆ ಬಂದಿಳಿದ ಸಲ್ಮಾನ್​!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ನಟ ಸಲ್ಮಾನ್​ ಖಾನ್​​, ಭಾರೀ ಭದ್ರತೆಯೊಂದಿಗೆ ತಮ್ಮ ಖಾಸಗಿ ಏರ್​ಪೋರ್ಟ್​ಗೆ ಬಂದಿದ್ದಾರೆ. ಈ ಸಮಯದಲ್ಲಿ ಅವರ ಪ್ರಮುಖ ಅಂಗರಕ್ಷಕ ಶೇರಾ ಕೂಡ ಈ ವಿಡಿಯೋನಲ್ಲಿದ್ದಾರೆ. ಕಾರಿನಲ್ಲಿ ಬಂದಿಳಿದ ಸಲ್ಮಾನ್​, ಪಾಪಾರಾಜಿಗಳ ಮಾತನಾಡದೇ ನೇರವಾಗಿ ವಿಮಾನ ನಿಲ್ದಾಣವನ್ನು ಸೇರಿದ್ದಾರೆ.

ಸಲ್ಮಾನ್​ ಮನೆ ಮೇಲೆ ಫೈರಿಂಗ್​!

2024 ರಲ್ಲಿ ನಟ ಸಲ್ಮಾನ್​ ಖಾನ್​ ಅವರ ಗೆಲಾಕ್ಸಿ ಅಪಾರ್ಟಮೆಂಟ್​ ಮೇಲೆ ಆರು ಜನ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು, ವಿಕ್ಕಿ ಗುಪ್ತಾ, ಸಾಗರ್ ಪಾಲ್, ಹರ್ಪಾಲ್ ಸಿಂಗ್, ಸೋನು ಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಅನುಜ್ ಕುಮಾರ್ ಥಪನ್ ಎಂಬಾತನನ್ನು ವಶಕ್ಕೆ ಪಡೆಯಲಾಗುತ್ತು. ಈ ಘಟನೆಯ ಜವಾಬ್ದಾರಿಯನ್ನು ಕೂಡ ಲಾರೆನ್ಸ್​​ ಬಿಷ್ಣೋಯ್​ ಗ್ಯಾಂಗ್​ ಹೊತ್ತುಕೊಂಡಿತ್ತು.

Also Read
"ಕಾರಿನ ಸ್ಟೀರಿಂಗ್ ಮಕ್ಕಳ ಆಟಿಕೆಯಲ್ಲ"! ಅಪ್ರಾಪ್ತನಿಂದ ಆಕ್ಸಿಡೆಂಟ್​; ಮಗನಿಗೆ ಕಾರು ಕೊಟ್ಟ ತಂದೆಗೆ 'ನೋ ರಿಲೀಫ್' ಎಂದ ಹೈಕೋರ್ಟ್! Karnataka High Court
ಮುಂಬೈ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಹಾಗೂ ಅತ್ಯಾಧುನಿಕ ಬಂದೂಕು ಹಿಡಿದ ಅಂಗರಕ್ಷಕರೊಂದಿಗೆ ನಟ ಸಲ್ಮಾನ್ ಖಾನ್

ಹಠ, ಬಿಟ್ಟು ಕ್ಷಮೆ ಕೇಳು!

ಇನ್ನು, ನಟ ಟೈಗರ್ ಶ್ರಾಫ್​ ಮೇಲಿನ ದಾಳಿ ಬಾಲಿವುಡ್​ನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಆದರೆ, ಈ ದಾಳಿ ನಟ ಸಲ್ಮಾನ್​ ಖಾನ್ ರನ್ನು ಉದ್ದೇಶಿಸಿ ನಡೆದಿದ್ದೆಂದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ, ಹಿರಿಯ ಗಾತಕ ಅನುಪ್​ ಜಲೋಟಾ, ಸಲ್ಮಾನ್​ ಖಾನ್​ ನೀವು ನಿಮ್ಮ ಹಠವನ್ನು ಬದಿಗಿಟ್ಟು, ಕೃಷ್ಣಮೃಗವನ್ನು ಬೇಟೆಯಾಡಿದ್ದಕ್ಕಾಗಿ ಬಿಷ್ಣೋಯ್​ ಸಮುದಾಯಕ್ಕೆ ಕ್ಷಮೆ ಕೇಳಿಬಿಡಿ. ಇಲ್ಲದೆ ಹೋದರೆ, ಈ ರೀತಿಯ ಟಾರ್ಗೆಟೆಡ್​ ಕಿಲ್ಲಿಂಗ್​ಗಳು ಮುಂದುವರಿಯಲಿದೆ ಎಂದಿದ್ದಾರೆ. ಆದರೆ ಈ ಘಟನೆ ಬಗ್ಗೆ ನಟ ಸಲ್ಮಾನ್​ ಇಲ್ಲಿವರೆಗೆ ಯಾವುದೇ ಹೇಳಿಕೆ ನೀಡಿಲ್ಲ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net