ಮಗಳಿಗಾಗಿ ಮೃಗವಾದ ತಂದೆ: ಕಿರುಕುಳ ನೀಡಿದವನಿಗೆ ಕಾಲೇಜು ಕ್ಯಾಂಪಸ್​ನಲ್ಲೇ ಸಿಕ್ತು ಧರ್ಮದೇಟು! Father Protects Daughter

(ಚಿತ್ರ X)
(ಚಿತ್ರ X)
Published on
ಪುಣೆ: ಹದಿನೈದು ದಿನಗಳಿಗೂ ಹೆಚ್ಚು ಕಾಲ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನಲೆ ತಂದೆಯೇ ವಿದ್ಯಾರ್ಥಿಯೊಬ್ಬನನ್ನು ಥಳಿಸಿರುವ ಘಟನೆ (Father Protects Daughter) ಪುಣೆಯ ಪ್ರತಿಷ್ಠಿತ ಕಾಲೇಜಿನೊಂದರಲ್ಲಿ ನಡೆದಿದೆ.

ಘಟನೆ ಏನು?

ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ವಿವಿಧ ಡಿಜಿಟಲ್​ ಪ್ಲಾಟ್​ಫಾರ್ಮ್​ಗಳ ಮೂಲಕ ಸುಮಾರು 15 ದಿನಗಳಿಂದ ನಿರಂತರ ಕಿರುಕುಳ ನೀಡುತ್ತಿದ್ದನು. ಈ ಸಂಬಂಧ ವಿದ್ಯಾರ್ಥಿನಿ ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದು, ತನ್ನ ತಂದೆ ಬಳಿ ಈ ವಿಚಾರವನ್ನು ಹೇಳಿದ್ದಾರೆ.
ಮಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ತಂದೆ, ಕಾಲೇಜು ಕ್ಯಾಂಪಸ್​ ಬಳಿ ಹೋಗಿ ವಿದ್ಯಾರ್ಥಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆತ ತನ್ನ ಪ್ರಚೋದನಕಾರಿ ನಡವಳಿಕೆಯನ್ನು ಮುಂದುವರೆಸಿದ್ದರಿಂದ ಕೋಪಗೊಂಡ ತಂದೆಯು ಆತನ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕ ಬಳಕೆದಾರರು ತಂದೆಯ ರಕ್ಷಣಾತ್ಮಕ ಪ್ರವೃತ್ತಿಯನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು ಭದ್ರತಾ ಸಿಬ್ಬಂದಿಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಸ್ಥಳೀಯ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಎರಡೂ ಪಕ್ಷಗಳ ವಿರುದ್ಧದ ಆರೋಪಗಳ ಕುರಿತು ಯಾವುದೇ ಔಪಚಾರಿಕ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net