ಈ 10 ಬೋಗಿಗಳ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿದ್ದು, ಸುಮಾರು 90 ಕಿಲೋಮೀಟರ್ ದೂರವನ್ನು ತಲುಪಲು ಸುಮಾರು ಎರಡು ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗದಲ್ಲಿ ಒಟ್ಟು 11 ತಂಗುದಾಣಗಳಿದ್ದು, ಪ್ರತಿದಿನ ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸಂಪೂರ್ಣವಾಗಿ ದೇಶೀಯ ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನವನ್ನು ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸಾಂಪ್ರದಾಯಿಕ ವಿದ್ಯುತ್ ಲೈನ್‌ಗಳ ಹಂಗಿಲ್ಲದೆ ಈ ರೈಲು ಚಲಿಸಲಿದೆ.