ಈ ನಡುವೆ, ಚುನಾವಣಾ ಕಣದಲ್ಲಿ ಒಂದು ರೋಚಕ ಬೆಳವಣಿಗೆ ನಡೆದಿತ್ತು. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಜಹಾಂಗೀರ್ ಖಾನ್ ಅವರು ಕಳೆದ ಮಂಗಳವಾರ (ಮೇ 19) ತಾವು ಈ ಮರುಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಠಾತ್ ಘೋಷಿಸಿದ್ದರು. ಜಹಾಂಗೀರ್ ಖಾನ್ ಅವರ ಈ ನಿರ್ಧಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ನಡೆ ಎಂದು ಟಿಎಂಸಿ ಸ್ಪಷ್ಟನೆ ನೀಡಿದೆ. ಮತ್ತೊಂದೆಡೆ, ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಭಾರತೀಯ ಜನತಾ ಪಕ್ಷವು (BJP) ಈ ಕ್ಷೇತ್ರದಿಂದ ದೇಬಾಂಶು ಪಾಂಡಾ ಅವರನ್ನು ಕಣಕ್ಕಿಳಿಸಿದ್ದು, ಗೆಲುವಿನ ಸಂಪೂರ್ಣ ವಿಶ್ವಾಸದಲ್ಲಿದೆ.