ಓಪನ್​ ಆಗದ ಫೇಸ್​ಬುಕ್​, ಇನ್​ಸ್ಟಾಗ್ರಾಮ್​! ಜಾಗತಿಕವಾಗಿ ಮೆಟಾ ಸೇವೆಯಲ್ಲಿ ವ್ಯತ್ಯಯ; ಬಳಕೆದಾರರ ಪರದಾಟ

ಮೆಟಾ ಸಂಸ್ಥೆಯ ಸೇವೆಗಳಲ್ಲಿ ವ್ಯತ್ಯಯ
ಮೆಟಾ ಸಂಸ್ಥೆಯ ಸೇವೆಗಳಲ್ಲಿ ವ್ಯತ್ಯಯ
Published on

ಪ್ರಮುಖ ಮುಖ್ಯಾಂಶಗಳು

  • ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಡೌನ್​
  • ಜಾಗತಿಕವಾಗಿ ತೊಂದರೆ ಅನುಭವಿಸಿದ ಬಳಕೆದಾರರು
ನವದೆಹಲಿ: ಮೆಟಾ ಸಂಸ್ಥೆಯ ವಾಟ್ಸ್​ಆ್ಯಪ್​, ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​​ ಪ್ಲಾಟ್​ಫಾರ್ಮ್​ಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಜಾಗತಿಕವಾಗಿ ಬಳಕೆದಾರರು ಪರದಾಡಿದ್ದಾರೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಓಪನ್​ ಮಾಡುವಲ್ಲಿ ಅಡಚಣೆ ಉಂಟಾಗಿದ್ದು, ಇದು ನೆಟ್​ವರ್ಕ್​ ಅಥವಾ ಟೆಕ್ನಿಕಲ್​ ಸಮಸ್ಯೆಯೇ ಎಂಬ ಗೊಂದಲ ಕೆಲ ಸಮಯ ಬಳಕೆದಾರರಲ್ಲಿ ಕಾಡಿತು. ಸಂಜೆಯಿಂದ ಸರ್ವರ್‌ಗಳು ಇದ್ದಕ್ಕಿದ್ದಂತೆ ಡೌನ್​ ಆಗಿದ್ದು, ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಲಕ್ಷಾಂತರ ಬಳಕೆದಾರರು ತೊಂದರೆ ಅನುಭವಿಸಿದರು.
ಭಾರತ ಸೇರಿ ಹಲವಾರು ದೇಶಗಳ ಬಳಕೆದಾರರಿಗೆ ಈ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸಮಸ್ಯೆ ಮಧ್ಯಾಹ್ನದಿಂದಲೂ ಇದೆ ಎನ್ನಲಾಗಿದೆ. ಆ್ಯಪ್​ಗಳನ್ನು ತೆರೆಯುವಲ್ಲಿ ಅಥವಾ ಬಳಸುವಲ್ಲಿ ಬಳಕೆದಾರರು ಸಾಕಷ್ಟು ಸಮಯ ಕಾಯುವಂತಾಯಿತು. ಇದು ಪೋಸ್ಟ್ ಮತ್ತು ವ್ಯೂವ್​ ಸಮಸ್ಯೆಯನ್ನು ಸೃಷ್ಟಿಸಿತು. ಈ ಕುರಿತಂತೆ ಮೆಟಾಗೆ ಅನೇಕ ಕಂಪನಿಗಳು ಇಮೇಲ್‌ ಮಾಡಿವೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net