ಪ್ರಸ್ತುತ, ಟ್ರಸ್ಟ್ ನೃತ್ಯ ಗೋಪಾಲ ದಾಸ್, ವಾಸುದೇವಾನಂದ ಸರಸ್ವತಿ, ವಿಶ್ವಪ್ರಸನ್ನ ತೀರ್ಥ, ಪರಮಾನಂದ ಗಿರಿ, ಗೋವಿಂದ್ ದೇವ್ ಗಿರಿ, ಕೃಷ್ಣ ಮೋಹನ್, ದಿನೇಂದ್ರ ದಾಸ್, ಕೆ. ಪರಾಸರನ್, ಚಂಪತ್ ರಾಯ್, ಅನಿಲ್ ಮಿಶ್ರಾ ಸೇರಿ ಒಟ್ಟು 11 ಸಾಮಾನ್ಯ ಸದಸ್ಯರನ್ನು ಹೊಂದಿದೆ. ಟ್ರಸ್ಟಿ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರ ಅಗಲಿಕೆಯಿಂದ ಉಪಾಧ್ಯಕ್ಷ ಹುದ್ದೆ ಸದ್ಯದ ಮಟ್ಟಿಗೆ ಖಾಲಿಯಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಹಲವಾರು ಹಿರಿಯ ಅಧಿಕಾರಿಗಳು ಸಹ ಟ್ರಸ್ಟ್‌ನ ಪದನಿಮಿತ್ತ ಸದಸ್ಯರಾಗಿ ಮುಂದುವರೆದಿದ್ದಾರೆ.