ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಸಂಸದ ಸಜ್ಜನ್ ಕುಮಾರ್ ಜೈಲಿನಲ್ಲೇ ನಿಧನ! Sajjan Kumar
Sajjan Kumar (ಚಿತ್ರ X)
Published on:
Copied
Follow Us
Sajjan Kumar: 1984ರ ಭೀಕರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ (80) ಇಂದು (ಆ.20) ಕೊನೆಯುಸಿರೆಳೆದಿದ್ದಾರೆ.
ಜೈಲಿನಿಂದ ಆಸ್ಪತ್ರೆಗೆ ರವಾನೆ
ಜೈಲಿನಲ್ಲಿ ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಅವರನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಿಲಾಯಿತು. ಆದಾಗ್ಯೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವೇನೆಂಬುದನ್ನು ಆಸ್ಪತ್ರೆ ಆಡಳಿತ ಮಂಡಳಿ ಈವರೆಗೂ ಬಹಿರಂಗಪಡಿಸಿಲ್ಲ.
ಭೀಕರ ದಂಗೆಯ ಪ್ರಮುಖ ರೂವಾರಿ
ದೆಹಲಿ ರಾಜಕಾರಣದಲ್ಲಿ ಪ್ರಭಾವಿ ಜಾಟ್ ನಾಯಕರಾಗಿ ಗುರುತಿಸಿಕೊಂಡಿದ್ದ ಸಜ್ಜನ್ ಕುಮಾರ್, 1980ರ ದಶಕದಲ್ಲಿ ರಾಜಕೀಯವಾಗಿ ಮುಂಚೂಣಿಯಲ್ಲಿದ್ದರು. ಆದರೆ, 1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ಭುಗಿಲೆದ್ದ ಸಿಖ್ ವಿರೋಧಿ ದಂಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ದೆಹಲಿ ಪೊಲೀಸರು ಇವರನ್ನು ಗುರುತಿಸಿದ್ದರು. ಈ ಗಲಾಟೆಯಲ್ಲಿ ದೆಹಲಿಯಲ್ಲಿ ಸುಮಾರು 3000ಕ್ಕೂ ಹೆಚ್ಚು ಸಿಖ್ಖರು ಪ್ರಾಣ ಕಳೆದುಕೊಂಡಿದ್ದರು.
ಮೂರು ದಶಕಗಳ ನಂತರ ಸಿಕ್ಕಿದ ಶಿಕ್ಷೆ
ದಂಗೆ ನಡೆದ ಆರಂಭಿಕ ದಶಕಗಳಲ್ಲಿ ಅಂದರೆ ವಿವಿಧ ತನಿಖಾ ಆಯೋಗಗಳ ಮುಂದೆ ಇವರ ಹೆಸರು ಪ್ರಮುಖವಾಗಿ ಹೊರಬಂದಿರಲಿಲ್ಲ. ಆದರೆ 2015ರಲ್ಲಿ ಕೇಂದ್ರ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ ಹಳೆಯ ಪ್ರಕರಣಗಳನ್ನು ಮರುತನಿಖೆಗೆ ಒತ್ತಾಯಿಸಿದಾಗ ಕುಮಾರ್ಗೆ ಕಾನೂನು ಸಂಕಷ್ಟ ಬಿಗಿಯಾಯಿತು.
ದೆಹಲಿಯ ಪಾಲಂ ಕಾಲೋನಿ ಪ್ರದೇಶದಲ್ಲಿ ನಡೆದ ಹತ್ಯೆಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಸರಸ್ವತಿ ವಿಹಾರ್ನಲ್ಲಿ ನಡೆದ ಕೊಲೆ ಪ್ರಕರಣದಲ್ಲೂ ಮತ್ತೊಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ಜನಕ್ಪುರಿ ಮತ್ತು ವಿಕಾಸಪುರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಇವರನ್ನು ಆರೋಪದಿಂದ ಮುಕ್ತಗೊಳಿಸಿತ್ತು.
ತಟಸ್ಥಗೊಂಡ ರಾಜಕೀಯ ಜೀವನ
1977ರಲ್ಲಿ ಕಾರ್ಪೊರೇಟರ್ ಆಗಿ ರಾಜಕೀಯ ಜೀವನ ಆರಂಭಿಸಿದ್ದ ಕುಮಾರ್, ಹೊರ ದೆಹಲಿ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 2009ರ ಲೋಕಸಭಾ ಚುನಾವಣೆ ವೇಳೆ ಸಾರ್ವಜನಿಕ ಒತ್ತಡ ಹೆಚ್ಚಾದ ಕಾರಣ ಕಾಂಗ್ರೆಸ್ ಪಕ್ಷ ಇವರಿಗೆ ನೀಡಿದ್ದ ಟಿಕೆಟ್ ಅನ್ನು ಹಿಂಪಡೆದಿತ್ತು. ಆ ಬಳಿಕ ಅವರು ರಾಜಕೀಯದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು (ಏಜೆನ್ಸೀಸ್).