ಖಾಕಿ ತೊಟ್ಟ ಕಮಾಂಡೋಗೂ ತಪ್ಪಲಿಲ್ಲ ವರದಕ್ಷಿಣೆ ಭೂತ! ಗರ್ಭಿಣಿ ಪತ್ನಿಯನ್ನು ಡಂಬ್ಬೆಲ್‌ನಿಂದ ಹೊಡೆದು ಕೊಂದ ಪತಿ | Dowry

ದೆಹಲಿ ಪೊಲೀಸ್​ ಸ್ವಾಟ್  ಕಮಾಂಡೋ ಕಾಜಲ್ ಚೌಧರಿ ಮತ್ತು ಪತಿ ಅಂಕುರ್​ ಚೌಧರಿ
ದೆಹಲಿ ಪೊಲೀಸ್​ ಸ್ವಾಟ್ ಕಮಾಂಡೋ ಕಾಜಲ್ ಚೌಧರಿ ಮತ್ತು ಪತಿ ಅಂಕುರ್​ ಚೌಧರಿ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಪೊಲೀಸರ ವಿಶೇಷ ಘಟಕದ ಕಮಾಂಡೋ ಆಗಿದ್ದ ಕಾಜಲ್ ಚೌಧರಿ
  • ವರದಕ್ಷಿಣೆ ಕಾರಣಕ್ಕಾಗಿ ಪತ್ನಿಯನ್ನು ಕೊಂದ ಪತಿ ಅಂಕುರ್​ ಚೌಧರಿ
  • ಮೃತ ಕಾಜಲ್​ ನಾಲ್ಕು ತಿಂಗಳ ಗರ್ಭಿಣಿ
ದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕ (ಸ್ವಾಟ್) ದ ಕಮಾಂಡೋ ಕಾಜಲ್ ಚೌಧರಿ (27), ಮಂಗಳವಾರ(ಜ.27) ಗಾಜಿಯಾಬಾದ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಾಜಲ್ ಚೌಧರಿ ಮೇಲೆ ಪತಿ ಅಂಕುರ್ ಚೌಧರಿ ಡಂಬ್ಬೆಲ್‌ನಿಂದ ಹಲ್ಲೆ ಮಾಡಿ, ಅವರ ತಲೆಯನ್ನು ಬಾಗಿಲಿನ ಚೌಕಟ್ಟಿನ ಮೇಲೆ ಇಟ್ಟು ಹೊಡೆದ ಪರಿಣಾಮ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ವರದಕ್ಷಣೆ ಹಿನ್ನಲೆ ಕೊಲೆ ಆರೋಪ

ಕಾಜಲ್ 2022 ರಲ್ಲಿ ಪದವಿ ಪೂರ್ಣಗೊಳಿಸಿ, 2023 ರಲ್ಲಿ ದೆಹಲಿ ಪೊಲೀಸರಲ್ಲಿ ಕಮಾಂಡೋ ಆಗಿ ಆಯ್ಕೆಯಾಗಿದ್ದಳು. ಆ ಸಮಯದಲ್ಲಿ ದೆಹಲಿಯ ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಅಂಕುರ್​ ಚೌಧರಿ ಪರಿಚಯವಾಗಿ, ನಂತರ ಇಬ್ಬರು ಮದುವೆಯಾದರು.
ಮದುವೆಯಾದ ದಿನದಿಂದಲೇ ಕಾಜಲ್​ಗೆ ಹಿಂಸೆ ನೀಡಲು ಶುರುವಿಟ್ಟ ಅಂಕುರ್​ ಮುದುವೆಯಾದ 15 ದಿನದಲ್ಲೇ ವರದಕ್ಷಿಣೆ ರೂಪದಲ್ಲಿ ಕಾರನ್ನು ನೀಡುವಂತೆ ಬೇಡಿಕೆ ಇಟ್ಟರು. 2024 ರಲ್ಲಿ ಕಾಜಲ್​ ದೆಹಲಿಗೆ ಸ್ಥಳಾಂತರಗೊಂಡರೂ ಸಹ ಅಂಕುರ್​ ಹಣ ಮತ್ತು ಕಾರಿನ್ನು ಕೇಳುತ್ತಲೇ ಇದ್ದನು. ಇದೇ ಕಾರಣಕ್ಕಾಗಿ ತಮ್ಮ ಮಗಳನ್ನು ಕೊಲೆಮಾಡಿ, ದೆಹಲಿ ಪೊಲೀಸ್​ನಲ್ಲಿ ಕೆಲಸ ಮಾಡುತ್ತಿರುವ ಕಾಜಲ್​ ಸಹೋದರ ನಿಖಿಲ್​ಗೆ ಕರೆಮಾಡಿ ಹೆಣವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾನೆ ಎಂದು ಮೃತ ಕಾಜಲ್ ಪಾಲಕರು ಆರೋಪಿಸಿದ್ದಾರೆ.

ಕಾಜಲ್ ನಾಲ್ಕು ತಿಂಗಳ ಗರ್ಭಿಣಿ

ಸಂತ್ರಸ್ತಳ ತಂದೆ ರಾಕೇಶ್, ತಮ್ಮ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಆರೋಪಿಸಿದ್ದು, ಅಂಕುರ್ ಎರಡು ಕೊಲೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅತ್ತೆ-ಮಾವಂದಿರು ಕಾಜಲ್‌ಗೆ ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಮುಂದುವರಿದ ಪೊಲೀಸ್​ ತನಿಖೆ

ಮಂಗಳವಾರ (ಜ.27) ಕಾಜಲ್​ಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವಪರೀಕ್ಷೆ ಮತ್ತು ನಡೆಯುತ್ತಿರುವ ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ರಾತ್ರಿಯೇ ಅಂಕುರ್​ನನ್ನು ಬಂಧಿಸಲಾಗಿದೆ. ಆರಂಭದಲ್ಲಿ ಆತನ ವಿರುದ್ಧ ಕೇವಲ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು, ಕಾಜಲ್ ಸಾವಿನ ನಂತರ, ಕೊಲೆ ಆರೋಪಗಳನ್ನು ಸಹ ಸೇರಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net