Amit Shah | ಭಯೋತ್ಪಾದನೆ ನಿರ್ಮೂಲನೆಯೇ ನಮ್ಮ ಮುಖ್ಯ ಗುರಿ: ಅಮಿತ್ ಷಾ

 Amit Shah ಬಿಎಸ್ಎಫ್​​​​ನ 61ನೇ ಸ್ಥಾಪನಾ ದಿನಾಚರಣೆಯಲ್ಲಿ ಅಮಿತ್ ಷಾ
Amit Shah ಬಿಎಸ್ಎಫ್​​​​ನ 61ನೇ ಸ್ಥಾಪನಾ ದಿನಾಚರಣೆಯಲ್ಲಿ ಅಮಿತ್ ಷಾ
Published on
ನವದೆಹಲಿ: ದೇಶದ ಮೇಲೆ ದಾಳಿ ಮಾಡಲು ಯೋಚಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದಕರು ಮತ್ತು ಒಳನುಸುಳುಕೋರರ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಶುಕ್ರವಾರ (ನ.21) ಘೋಷಿಸಿದ್ದಾರೆ.
ಈ ಬಗ್ಗೆ ದೇಶದ ಮೊದಲ ರಕ್ಷಣಾ ಪಡೆ BSFನ 61ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅಮಿತ್ ಷಾ, ಕಳೆದ ಏಪ್ರಿಲ್​ನಲ್ಲಿ ನಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ , ನಾಗರಿಕರನ್ನು ಉಗ್ರರು ಧರ್ಮದ ಆಧಾರದ ಮೇಲೆ ಗುರಿಯಾಗಿಸಿಕೊಂಡು ದಾಳೀ ಮಾಡಿದರು. ನಂತರ ನಾವು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದೆವು ಎಂದಿದ್ದಾರೆ.
ಸಿಂಧೂರದ ಸಮಯದಲ್ಲಿ ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನೆಲೆಗಳನ್ನು ನಾಶ ಮಾಡಿದವು. ನಮ್ಮ ಸೇನೆಯು ಒಂಬತ್ತು ಸ್ಥಳಗಳಲ್ಲಿದ್ದ ಉಗ್ರರ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧೂಳಿಪಟ ಎಂದು ಮಾಡಿದವು ಎಂದಿದ್ದಾರೆ. ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ಮತ್ತು ದೇಶದ ನಾಗರಿಕರನ್ನು ರಕ್ಷಿಸುವುದು ನಮ್ಮ ಗುರಿ ಎಂದು ಗೃಹ ಸಚಿವರು ಹೇಳಿದ್ದಾರೆ.

2026 ರ ವೇಳೆಗೆ ನಕ್ಸಲಿಸಂ ಆನ್ನು ನಾಶ ಮಾಡುತ್ತೇವೆ: ಅಮಿತ್ ಷಾ

ಮುಂದುವರೆದು ಮಾತನಾಡಿದ ಷಾ, 2026ರ ಮಾರ್ಚ್ 31 ರೊಳಗೆ ದೇಶವನ್ನು ನಕ್ಸಲೀಯನಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ದೃಢನಿಶ್ಚಯ ಮಾಡಿದ್ದೇನೆ. ಅಲ್ಲದೆ, ದೇಶದ ಗಡಿಯುದ್ದಕ್ಕೂ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮೇಲೆ ಬಿಎಸ್‌ಎಫ್ ಕಡಿವಾಣ ಹಾಕಿದೆ. ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‌ಗಳನ್ನು ಬಂಧಿಸಲು ಪ್ರತ್ಯೇಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಡಿಯಲ್ಲಿ ಒಳನುಸುಳುಕೋರರನ್ನು ತಡೆಯುತ್ತೇವೆ

ಇಂದು ದೇಶದ ಎಲ್ಲಾ ಗಡಿಗಳಲ್ಲಿ ಒಳನುಸುಳುವಿಕೆಯನ್ನು ತಡೆಯಲು ಬಿಎಸ್‌ಎಫ್ ಪೂರ್ಣ ಸಾಮರ್ಥ್ಯದಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಕೆಲವು ರಾಜಕೀಯ ಪಕ್ಷಗಳು ಒಳನುಸುಳುವವರನ್ನು ಹೊರಹಾಕುವ ಅಭಿಯಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಆದರೆ ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ಈ ಪ್ರಕ್ರಿಯೆಯನ್ನು ವ್ಯವಸ್ಥಿತ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತಿದೆ ಎಂದು ಗೃಹ ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net