ಇದಕ್ಕೂ ಮೊದಲು 2020-21ರಲ್ಲಿ 8.50 ಶೇಕಡಾ, 2018-19ರಲ್ಲಿ 8.65 ಶೇಕಡಾ ಹಾಗೂ 2015-16ರಲ್ಲಿ 8.80 ಶೇಕಡಾ ಬಡ್ಡಿದರ ನೀಡಲಾಗಿತ್ತು. 2013-14 ಮತ್ತು 2014-15ರಲ್ಲಿ ಸದಸ್ಯರಿಗೆ 8.75 ಶೇಕಡಾ ಬಡ್ಡಿದರ ಲಭಿಸಿತ್ತು. ಈಗ ಸರ್ಕಾರದ ಅಂತಿಮ ಅನುಮೋದನೆ ದೊರೆತಿರುವುದರಿಂದ EPF ಸದಸ್ಯರು ತಮ್ಮ ಖಾತೆಗಳಲ್ಲಿ 2025-26ನೇ ಸಾಲಿನ ಬಡ್ಡಿ ಹಣವನ್ನು ಶೀಘ್ರದಲ್ಲೇ ನೋಡಬಹುದಾಗಿದೆ. ಇದರಿಂದ ಕೋಟ್ಯಂತರ ಉದ್ಯೋಗಿಗಳ ಉಳಿತಾಯಕ್ಕೆ ಮತ್ತಷ್ಟು ಬಲ ಸಿಗಲಿದೆ,(ಎಜೆನ್ಸೀಸ್).