ಸರ್ಕಾರಿ ಕೆಲಸಕ್ಕಿರುವ ಡಿಮ್ಯಾಂಡ್ ನೋಡಿ... ಕೆಲಸ ಖಾಯಂ ಅಲ್ಲ ಅಂತ ಮದುವೆಯನ್ನೇ ಮುರಿದುಕೊಂಡ ಯುವಕ! Engagement cancelled

ಮದುವೆ ನಿಶ್ಚಯವಾಗಿತ್ತು, ದಿನಾಂಕವೂ ಫಿಕ್ಸ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವಷ್ಟರಲ್ಲಿ ವಧುವಿನ ಉದ್ಯೋಗದ ವಿಚಾರವೊಂದು ಮದುವೆಯನ್ನೇ ಮುರಿದುಬಿಟ್ಟಿದೆ. ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಉದ್ಯೋಗ ತಾತ್ಕಾಲಿಕ ಎಂಬ ಸತ್ಯ ತಿಳಿಯುತ್ತಿದ್ದಂತೆ ವರನ ಕಡೆಯವರು ನಿಶ್ಚಿತಾರ್ಥವನ್ನೇ ರದ್ದುಗೊಳಿಸಿದ್ದಾರೆ. Engagement cancelled
ಸರ್ಕಾರಿ ಕೆಲಸಕ್ಕಿರುವ ಡಿಮ್ಯಾಂಡ್ ನೋಡಿ
ಸರ್ಕಾರಿ ಕೆಲಸಕ್ಕಿರುವ ಡಿಮ್ಯಾಂಡ್ ನೋಡಿWEB
Published on: 

ನವದೆಹಲಿ: ಮದುವೆ ನಿಶ್ಚಯವಾಗಿತ್ತು, ದಿನಾಂಕವೂ ಫಿಕ್ಸ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವಷ್ಟರಲ್ಲಿ ವಧುವಿನ ಉದ್ಯೋಗದ ವಿಚಾರವೊಂದು ಮದುವೆಯನ್ನೇ ಮುರಿದುಬಿಟ್ಟಿದೆ. ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಉದ್ಯೋಗ ತಾತ್ಕಾಲಿಕ ಎಂಬ ಸತ್ಯ ತಿಳಿಯುತ್ತಿದ್ದಂತೆ ವರನ ಕಡೆಯವರು ನಿಶ್ಚಿತಾರ್ಥವನ್ನೇ ರದ್ದುಗೊಳಿಸಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮದುವೆಗಾಗಿ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಹುಡುಕಾಟ ನಡೆಸುತ್ತಿದ್ದ ಯುವಕನಿಗೆ ಬಿಎಸ್ಸಿ ಪದವಿ ಪಡೆದಿದ್ದ ಯುವತಿಯ ಪರಿಚಯವಾಗಿತ್ತು. ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಆಕೆ ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆಯ ಉದ್ಯೋಗ ತಾತ್ಕಾಲಿಕವಾಗಿತ್ತು. ಈ ಪ್ರಮುಖ ವಿಚಾರವನ್ನು ಮ್ಯಾಟ್ರಿಮೋನಿ ಪ್ರೊಫೈಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ ಎನ್ನಲಾಗಿದೆ.

ಮಾತುಕತೆ ವೇಳೆ ಯುವತಿ ವರನ ಸಂಬಳದ ಬಗ್ಗೆ ವಿಚಾರಿಸಿದ್ದಾಳೆ. ತನಗೆ ಮದುವೆಯಾಗುವ ಹುಡುಗ ಇಂತಿಷ್ಟು ಸಂಬಳ ಪಡೆಯಬೇಕು, ಸ್ವಂತ ಮನೆ ಹಾಗೂ ಕಾರು ಹೊಂದಿರಬೇಕು ಎಂಬ ನಿರೀಕ್ಷೆಗಳನ್ನೂ ಮುಂದಿಟ್ಟಿದ್ದಾಳೆ. ಅಷ್ಟೇ ಅಲ್ಲ, ತನಗೆ ಎತ್ತರದ ಹುಡುಗನೇ ಬೇಕು ಎಂದಿದ್ದಾಳೆ. ಆದರೆ ಯುವಕನ ಎತ್ತರ 5 ಅಡಿ 5 ಇಂಚುಗಳಷ್ಟಿತ್ತು. ಈ ಮಾಹಿತಿಯೂ ಮ್ಯಾಟ್ರಿಮೋನಿ ಪ್ರೊಫೈಲ್‌ನಲ್ಲಿ ಮೊದಲೇ ನಮೂದಾಗಿತ್ತು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಇತ್ತ ಯುವಕನ ಹಿನ್ನೆಲೆಯೂ ಸಾಮಾನ್ಯವಾಗಿರಲಿಲ್ಲ. ಆತ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದು, ವಿದೇಶದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದ್ದ. ಅಲ್ಲದೆ, ಇಸ್ರೋದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ. ಉತ್ತಮ ಉದ್ಯೋಗ ಹಾಗೂ ಆರಾಮದಾಯಕ ಜೀವನಶೈಲಿಯನ್ನೂ ಹೊಂದಿದ್ದ ಎನ್ನಲಾಗಿದೆ.

ಎರಡೂ ಕುಟುಂಬಗಳ ನಡುವೆ ಮಾತುಕತೆ ಸುಗಮವಾಗಿ ಸಾಗಿತ್ತು. ಮದುವೆಗೂ ಒಪ್ಪಿಗೆ ದೊರೆತು ನಿಶ್ಚಿತಾರ್ಥದ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಆದರೆ ಈ ಹಂತದಲ್ಲಿ ಯುವತಿಯ ಸರ್ಕಾರಿ ಉದ್ಯೋಗ ಕಾಯಂ ಅಲ್ಲ, ತಾತ್ಕಾಲಿಕ ಎಂಬ ವಿಚಾರ ವರನ ಕುಟುಂಬಕ್ಕೆ ತಿಳಿದುಬಂದಿದೆ. ಇದರಿಂದ ಅಸಮಾಧಾನಗೊಂಡ ವರನ ಕಡೆಯವರು ನಿಶ್ಚಿತಾರ್ಥವನ್ನೇ ರದ್ದುಗೊಳಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಮಗನ ಜಗಳ ಬಿಡಿಸಲು ಬಂದ ಮಾಜಿ ಯೋಧನಿಗೆ ಚಾಕು ಇರಿತ; ಆರೋಪಿಗಳ ಬಂಧನ! mumbai crime

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ

ಈ ಘಟನೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮದುವೆಯಂತಹ ಸಂಬಂಧದಲ್ಲಿ ಉದ್ಯೋಗದ ಸ್ಥಿತಿಗತಿ ಸೇರಿದಂತೆ ಪ್ರಮುಖ ವಿಚಾರಗಳನ್ನು ಮೊದಲೇ ತಿಳಿಸಬೇಕಿತ್ತು. ಸತ್ಯವನ್ನು ಮುಚ್ಚಿಡುವುದು ನಂಬಿಕೆಗೆ ಧಕ್ಕೆ ತರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆಕೆ ತಾತ್ಕಾಲಿಕ ಉದ್ಯೋಗದ ವಿಚಾರವನ್ನು ಮೊದಲೇ ತಿಳಿಸಿಲ್ಲ. ಅಲ್ಲದೆ, ಆಕೆಯ ನಿರೀಕ್ಷೆಗಳು ಕೂಡ ಅತಿಯಾಗಿವೆ. ಹೀಗಾಗಿ ವರ ನಿಶ್ಚಿತಾರ್ಥ ಮುರಿದಿದ್ದು ಸರಿಯಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು, ಪ್ರಮುಖ ವಿಚಾರಗಳನ್ನು ಮುಚ್ಚಿಟ್ಟು ಸುಳ್ಳು ಹೇಳುವುದನ್ನು ಯಾರೂ ಪ್ರಶ್ನಿಸಬಾರದೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇನ್ನೂ ಕೆಲವರು, ಒಂದು ಕಡೆಯವರ ಹೇಳಿಕೆ ಕೇಳಿ ಮಾತ್ರ ನಿರ್ಧಾರಕ್ಕೆ ಬರಬಾರದು. ಘಟನೆಯ ಮತ್ತೊಂದು ಮಗ್ಗುಲೂ ಇರಬಹುದು ಎಂದು ಎಚ್ಚರಿಸಿದ್ದಾರೆ. ಮದುವೆ ಸಂಬಂಧಗಳಲ್ಲಿ ಸಂಬಳ, ಉದ್ಯೋಗ, ಆಸ್ತಿ ಹಾಗೂ ವೈಯಕ್ತಿಕ ನಿರೀಕ್ಷೆಗಳಿಗಿಂತ ಪರಸ್ಪರ ನಂಬಿಕೆ ಮತ್ತು ಪಾರದರ್ಶಕತೆ ಮುಖ್ಯವೇ ಎಂಬ ಚರ್ಚೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ.