ಬೇಟೆಗಾಗಿ ಚಿರತೆಯೆಂತೆ, ಕ್ಯಾರಕಲ್ ಸಂಚು ಹಾಕುತ್ತಿರುವ ದೃಶ್ಯವನ್ನು ಪಿಟಿಐ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಾಡು ಬೆಕ್ಕುಗಳು ಸದ್ಯ ಅಳಿವಿನಂಚಿಗೆ ಸಾಗಿದೆ. ಇವು ಒಣ ಹುಲ್ಲು ಪ್ರದೇಶವಾದ ಮಧ್ಯಪ್ರಾಚ್ಯ, ಏಷ್ಯಾ, ಆಫ್ರೀಕಾದಂತಹ ಭಾಗಗಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಗುಜರಾತ್, ರಾಜಸ್ಥಾನ ಮಧ್ಯಪ್ರದೇಶದ ಕುರುಚಲು ಕಾಡು, ಹುಲ್ಲು ಗಾವಲಿನ ಪ್ರದೇಶ ಹಾಗೂ ಅರೆ ಮರುಭೂಮಿಯಲ್ಲಿ ಕಾಣಿಸಿಕೊಳ್ಳುತ್ತವೆ.