ಗುಂಡಿನ ಚಕಮಕಿ; 12 ಮಾವೋದಿಗಳ ಎನ್​ಕೌಂಟರ್: ಕಾರ್ಯಚರಣೆಯಲ್ಲಿ ಮೂವರು ಡಿಆರ್​​ಜಿ ಜವಾನರು ಬಲಿ!

Encounter
Encounter
Published on
ಛತ್ತಿಸ್​ಘಡ: ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಈ ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳು ಮೃತಪಟ್ಟಿದ್ದಾರೆ. ಅಲ್ಲದೆ, ಕಾರ್ಯಚರಣೆಯಲ್ಲಿ ಮೂವರು ಪೊಲೀಸರು(ಜಿಲ್ಲಾ ಮೀಸಲು ಪಡೆ,ಡಿಆರ್​​ಜಿ) ಹುತಾತ್ಮರಾದ ಘಟನೆ ಛತ್ತಿಸ್​ಘಡದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಎನ್‌ಕೌಂಟರ್ ನಡೆದ ಸ್ಥಳದಿಂದ 12 ಮಾವೋವಾದಿ ಕಾರ್ಯಕರ್ತರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್‌ಎಲ್‌ಆರ್ ರೈಫಲ್‌ಗಳು, 303 ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಕೊಲ್ಲಲ್ಪಟ್ಟವರ ಗುರುತುಗಳು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂತೇವಾಡ-ಬಿಜಾಪುರ ಡಿಆರ್‌ಜಿ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಸಿಆರ್‌ಪಿಎಫ್ ಮತ್ತು ಕೋಬ್ರಾ ಕಮಾಂಡೋಗಳ ಜಂಟಿ ತಂಡವು ದಟ್ಟ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿವೆ.
ಬಸ್ತರ್ ವಿಭಾಗದ ದಂತೇವಾಡ ಪಕ್ಕದಲ್ಲಿರುವ ಗಂಗಲೂರು ಪ್ರದೇಶದ ಕಾಡುಗಳಲ್ಲಿ ನಕ್ಸಲರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಬಸ್ತರ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಟಲಿಂಗಮ್ ಹೇಳಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net