ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್: ಭದ್ರತಾ ಪಡೆಗಳ ಗುಂಡಿಗೆ ಭಯೋತ್ಪಾದಕ ಬಲಿ; AK-47 ಜಪ್ತಿ! Terrorist Killed
ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಭಾರತೀಯ ಸೇನೆಯ ಕಾರ್ಯಾಚರಣೆ ಸಾಂಕೇತಿಕ ಚಿತ್ರ
Published on:
Copied
Follow Us
ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒರ್ವ ಭಯೋತ್ಪಾದಕ (Terrorist Killed) ಸೇನಾ ಸಿಬ್ಬಂದಿಗಳ ಗುಂಡಿಗೆ ಬಲಿಯಾಗಿದ್ದಾನೆಂದು ತಿಳಿದು ಬಂದಿದೆ.
ಖಚಿತ ಗುಪ್ತಚರ ಮಾಹಿತಿ ಆಧರಿಸಿ ಅಶ್ದರ್ ಗಲಿ ಪ್ರದೇಶದಲ್ಲಿ ಸರ್ಚ್ ಆಪರೇಷನ್ ನಡೆಸುತ್ತಿದ್ದಾಗ, ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಸಿಆರ್ಪಿಎಫ್, ಭಾರತೀಯ ಸೇನೆ ಹಾಗೂ ಜಮ್ಮು ಪೊಲೀಸರು ಒಬ್ಬ ಉಗ್ರಗಾಮಿಯನ್ನು ಸದೆಬಡಿದಿದ್ದಾರೆಂದು ವರದಿಯಾಗಿದೆ.
ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೆಷ್ಟು ಭಯೋತ್ಪಾದಕರು ಅಡಗಿದ್ದಾರೆ? ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಏನಾದರೂ ಸಾವ-ನೋವು ಸಂಭವಿಸಿದೆಯೇ? ಎನ್ನುವುದು ನಂತರದಲ್ಲಿ ತಿಳಿದು ಬರಬೇಕಿದೆ.
ಶಸ್ತ್ರಾಸ್ತ್ರ ಜಫ್ತಿ!
ಈ ಕಾರ್ಯಾಚರಣೆ ಬಗ್ಗೆ ಟ್ವಿಟರ್ನಲ್ಲಿ ಜಮ್ಮು-ಕಾಶ್ಮೀರದ ಚಿನಾರ್ ಟ್ರೂಪ್ಸ್ ಮಾಹಿತಿ ಹಂಚಿಕೊಂಡಿದ್ದು, ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವ ಭಯೋತ್ಪಾದಕ ಯಾವ ಸಂಘಟನೆಗೆ ಸೇರಿದ್ದನೆಂದು ತಿಳಿದು ಬಂದಿಲ್ಲ. ಆದರೆ ಇತನಿಂದ ಎಕೆ-47 ರೈಫಲನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).