ದೇವರ ತೀರ್ಥ ಎಂದು ಕೊಟ್ಟ ನಿಂಬೆ ಹುಳಿ ಕುಡಿದ ಸಿಬ್ಬಂದಿ; ರಿಯಾಕ್ಷನ್​ ಹೇಗಿತ್ತು ನೋಡಿ..Office Prank

Lemon Juice Prasad Prank
Lemon Juice Prasad Prank
Published on

ಪ್ರಮುಖ ಮುಖ್ಯಾಂಶಗಳು

  • ತೀರ್ಥ ಎಂದು ನಂಬಿ ನಿಂಬೆ ಹಣ್ಣಿನ ಹುಳಿ ಕುಡಿದ ಸಿಬ್ಬಂದಿ
  • ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆದ ಉದ್ಯೋಗಿಗಳ ಮುಖಭಾವದ ವಿಡಿಯೋ.
  • ಭಾರತೀಯರನ್ನು ಸಾಯಿಸುವುದು ಎಷ್ಟು ಸುಲಭ ನೋಡಿ ಎಂದ ನೆಟ್ಟಿಗರು
Lemon Juice Prasad Prank: ಭಾರತೀಯರಾದ ನಾವು ದೇವರು, ದೇವಸ್ಥಾನ ಎಂದರೆ ಅದೇನೋ ಪ್ರೀತಿ, ಭಕ್ತಿ. ಹೀಗಾಗಿ ಪವಿತ್ರ ಕ್ಷೇತ್ರಗಳಿಗೆ ತೆರಳಿದಾಗ ಅಲ್ಲಿ ಸಿಗುವ ತೀರ್ಥ, ಪ್ರಸಾದವನ್ನು ತಂದು ದೇವರ ಮುಂದಿಟ್ಟು ಪೂಜಿಸಿ ನೆರೆಹೊರೆಯವರಿಗೆ ಹಂಚಿ ನಾವು ಕೈ ಮುಗಿದು ಸೇವಿಸುತ್ತೇವೆ. ಕಚೇರಿಯಲ್ಲಿಯೂ ಸಹೋದ್ಯೋಗಿ ಕೊಟ್ಟ ಪ್ರಸಾದವನ್ನು ಕಣ್ಮುಚ್ಚಿ ತಿನ್ನುತ್ತೇವೆ.
ಹೀಗಾಗಿ ಉದ್ಯೋಗಿಯೊಬ್ಬರು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಪ್ರ್ಯಾಂಕ್ ಮಾಡಿದ್ದಾರೆ. ಗಂಭೀರವಾಗಿ ಕೆಲಸ ಮಾಡುವ ಕಚೇರಿ ಸಿಬ್ಬಂದಿ ಮೊಗದಲ್ಲಿ ಮಂದ ಹಾಸ ಮೂಡಿಸುವ ಸಲುವಾಗಿ ಮಾಡಿದ ಪ್ರ್ಯಾಂಕ್​ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.
ತೀರ್ಥದ ಹೆಸರಲ್ಲಿ ಕಚೇರಿ ಸಹೋದ್ಯೋಗಿಗಳಿಗೆ ಉದ್ಯೋಗಿಯೊಬ್ಬ, ಕೊಟ್ಟಿದ್ದು ತೆಂಗಿನ ಕಾಯಿ, ಕರ್ಪೂರ, ತುಳಸಿಯಿದ್ದ ನೀರಲ್ಲ. ಬದಲಿಗೆ ನಿಂಬೆಹಣ್ಣಿನ ರಸ. ಅದರಲ್ಲಿ ಸಕ್ಕರೆಯೂ ಇರಲಿಲ್ಲ, ನೀರನ್ನು ಬೆರೆಸಿರಲಿಲ್ಲ. ಕೇವಲ ಅಪ್ಪಟ ಹುಳಿ ನಿಂಬೆಹಣ್ಣಿನ ರಸವಾಗಿತ್ತು.

ಪ್ರಸಾದದ ಹೆಸರಲ್ಲಿ ಕೊಟ್ಟಿದ್ದು ನಿಂಬೆಹಣ್ಣಿನ ಹುಳಿ!

ಕಚೇರಿ ಎಂದರೆ ಅದೊಂದು ಶಾಂತ ವಾತವರಣದಿಂದ ಕೂಡಿರುವ ಸ್ಥಳ. ಆದರೆ, ಮನಸ್ಸು ಮಾತ್ರ ಹಾಗಿರೋದಿಲ್ಲ. ನೂರಾರು ಚಿಂತೆ, ಗ್ರಾಹಕರನ್ನು ಒಲಿಸಿಕೊಳ್ಳಲು ಮಾಡಬೇಕಾದ ತಂತ್ರ, ತೆರಿಗೆ ಹಣ, ಸ್ಯಾಲರಿ ಹೀಗೆ ಮನಸ್ಸಿನಲ್ಲಿ ಸಾಕಷ್ಟು ಗುದ್ದಾಟಗಳು ಕೇಳಿಸಸಂತೆ ನಡೆಯುತ್ತಿದೆ. ಹೀಗಾಗಿ, ಸಿಬ್ಬಂದಿಯೊಬ್ಬರು ತಮ್ಮ ಕಚೇರಿಯಲ್ಲಿರುವ ಇತರ ಸಿಬ್ಬಂದಿಗೆ ದೇವಸ್ಥಾನದ ತೀರ್ಥ ಎಂದು ನಿಂಬೆ ಹುಳಿ ಕೊಟ್ಟಿದ್ದಾರೆ, ಈ ಬಗ್ಗೆ ತಿಳಿಯದೇ ಕುಡಿದ ಅವರು ಹೇಗೆಲ್ಲ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎನ್ನುವುದು ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ಬೇಬಿ ಆರ್ಗಾನೊ ಎಂಬ ತಂಡದ ಇನ್​ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋ ಅಪ್ಲೋಡ್​ ಆಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಕಂಪ್ಯೂಟರ್​ ಮುಂದೆ ಗಂಭೀರವಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಬಿಳಿ ಬೌಲ್​​ನಲ್ಲಿರುವ ತೀರ್ಥವನ್ನು ಕೈಗೆ ಹಾಕುತ್ತಾನೆ. ಅದು ತೀರ್ಥ ಎಂದು ನಂಬಿ ಕುಡಿಯುವ ಅವರು ನಿಂಬೆಯ ಹುಳಿಯನ್ನು ತಡೆಯಲಾಗದೆ ಮುಖವನ್ನು ಕಿವುಚಿದಂತೆ ಮಾಡಿಕೊಳ್ಳುವುದು ವಿಡಿಯೋದಲ್ಲಿದೆ. ಜೊತೆಗೆ ಅದನ್ನು ಕೆಲವರು ತಲೆಗೂ ಒರೆಸಿಕೊಂಡಿದ್ದಾರೆ, ಇನ್ನು ಕೆಲವರು ಅವರತ್ತ ಸಿಟ್ಟಿನಿಂದ ನೋಡಿ ಕೋಪ ಹೊರಹಾಕಿದ್ದಾರೆ.

ಶೀರ್ಷಿಕೆ ಕೊಟ್ಟಿದ್ದು ಹೀಗೆ

ನಿಂಬೆಹಣ್ಣಿನ ರುಚಿ ಎಲ್ಲರ ಮೇಲೂ ಪ್ರಭಾವ ಬೀರಿತು. ಆಫೀಸ್​ನಲ್ಲಿ ಮಾಡಿದ ಪ್ರಾಂಕ್​ ಹೇಗೆಲ್ಲ ಕೆಲಸ ಮಾಡಿತು ಎನ್ನುವುದನ್ನು ಉಲ್ಲೇಖಿಸಿ ಬೇಬಿ ಆರ್ಗಾನೊ ಇನ್​ಸ್ಟಾಗ್ರಾಂ ಖಾತೆಯ ಅಡ್ಮಿನ್ ಶೀರ್ಷಿಕೆ ಕೊಟ್ಟಿದ್ದಾರೆ. ಭಾರತ ಎಂದರೇನು ಎಂಬುದನ್ನು ಈ ವಿಡಿಯೋ ವಿವರಿಸುತ್ತದೆ. ಅಂಧ ಭಕ್ತಿ, ಜನರ ಆಲೋಷನೆಯನ್ನು ಕುರುಡು ಭಕ್ತಿ ಹೇಗೆ ದೂರ ಮಾಡುತ್ತದೆ ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆ ಎಂದು ಮಿಶ್ರಾ ಎನ್ನುವರು ಹೇಳಿದ್ದಾರೆ.
"ಭಾರತೀಯರನ್ನು ಸಾಯಿಸುವುದು ಎಷ್ಟು ಸುಲಭ ನೋಡಿ, ಅವರು ಪ್ರಸಾದ ಎಂದರೆ ಸಾಕು ಬೇಡ ಎನ್ನದೇ ಪಡೆದುಕೊಳ್ಳುತ್ತಾರೆ" ಎಂದು ತಮಾಷೆ ಮಾಡಿದ್ದಾರೆ. ಆ ಎರಡನೇ ವ್ಯಕ್ತಿ ಹೊಡೆಯಲು ಕೈ ಎತ್ತುತ್ತಿದ್ದ, ಆದರೆ ಆಫೀಸ್ ಮರ್ಯಾದೆ ಆತನನ್ನು ತಡೆಯಿತು" ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net