ಈ ಕುರಿತು ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿಯು ನಮ್ಮ ಸಂವಿಧಾನದ ಮೇಲೆ ನಡೆದ ನೇರ ಆಕ್ರಮಣವಾಗಿತ್ತು. ರಾಜಕೀಯ ನಾಯಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗಟ್ಟಲಾಯಿತು. ಆದರೆ, ಅಂತಹ ಕಠಿಣ ಪರಿಸ್ಥಿತಿಯಲ್ಲೂ ಮೌನಕ್ಕೆ ಶರಣಾಗದೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದ ಅಸಂಖ್ಯಾತ ಭಾರತೀಯರ ಅಪ್ರತಿಮ ಧೈರ್ಯ ಮತ್ತು ಸಾಹಸ ಈ ದೇಶಕ್ಕೆ ದಾರಿದೀಪವಾಯಿತು ಎಂದು ಬರೆದಿದ್ದಾರೆ.