ಇಂದು ಮಧ್ಯಾಹ್ನದ ವೇಳೆಗೆ ಜಾಗತಿಕ ಮಟ್ಟದ ಪ್ರಮುಖ ಸಾಮಾಜಿಕ ಜಾಲತಾಣವಾದ 'X' ದಿಢೀರ್ ತಾಂತ್ರಿಕ ದೋಷ
ಭಾರತ ಸೇರಿದಂತೆ ವಿವಿಧ ಭಾಗಗಳಲ್ಲಿ ಎಕ್ಸ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ವರದಿಗಳು ಕೇಳಿಬರುತ್ತಿವೆ
ದೂರುಗಳ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಕಾಣುತ್ತಿದ್ದು, ಈಗಾಗಲೇ 300ಕ್ಕೂ ಅಧಿಕ ವರದಿಗಳು ದಾಖಲಾಗಿವೆ
X Down: ಇಂದು (ಗುರುವಾರ) ಮಧ್ಯಾಹ್ನದ ವೇಳೆಗೆ ಜಾಗತಿಕ ಮಟ್ಟದ ಪ್ರಮುಖ ಸಾಮಾಜಿಕ ಜಾಲತಾಣವಾದ 'X' (ಹಿಂದೆ ಟ್ವಿಟರ್) ದಿಢೀರ್ ತಾಂತ್ರಿಕ ದೋಷವನ್ನು ಎದುರಿಸುತ್ತಿದ್ದು, ಲಕ್ಷಾಂತರ ಬಳಕೆದಾರರು ಪರದಾಡುವಂತಾಗಿದೆ. ಆದಾಗ್ಯೂ, ಭಾರತ ಸೇರಿದಂತೆ ವಿವಿಧ ಭಾಗಗಳಲ್ಲಿ ಎಕ್ಸ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ವರದಿಗಳು ಕೇಳಿಬರುತ್ತಿವೆ.
ಡೌನ್‌ಡೆಕ್ಟರ್ ವರದಿಯ ಪ್ರಕಾರ, ದೂರುಗಳ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಕಾಣುತ್ತಿದ್ದು, ಈಗಾಗಲೇ 300ಕ್ಕೂ ಅಧಿಕ ವರದಿಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಬಳಕೆದಾರರು ತಮ್ಮ ಫೀಡ್ ಅನ್ನು ರಿಫ್ರೆಶ್ ಮಾಡಲು ಅಥವಾ ಅಪ್ಲಿಕೇಶನ್ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಇದೀಗ ಎಕ್ಸ್ ಡೌನ್ ಆಗಿದಿಯೇ ಎಂದು ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಬುಧವಾರವಷ್ಟೇ ಜಾಗತಿಕವಾಗಿ ಸುಮಾರು 6,000ಕ್ಕೂ ಅಧಿಕ ದೂರುಗಳು ದಾಖಲಾಗಿ ಪ್ಲಾಟ್‌ಫಾರ್ಮ್ ಸ್ತಬ್ಧವಾಗಿತ್ತು. ಆ ಘಟನೆ ಮಾಸುವ ಮುನ್ನವೇ ಗುರುವಾರವೂ ಎಕ್ಸ್ನಲ್ಲಿ ಅಡಚಣೆ ಮುಂದುವರಿದಿರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವ ನಗರಗಳು ಮತ್ತು ದೇಶಗಳು X ಔಟೇಜ್ ಅನ್ನು ವರದಿ ಮಾಡುತ್ತಿವೆ?
ಎಕ್ಸ್ನಲ್ಲಿ ತಾಂತ್ರಿಕ ದೋಷ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಆದಾಗ್ಯೂ ಭಾರತದಲ್ಲಿ ನವದೆಹಲಿ, ಮುಂಬೈ, ಪುಣೆ, ಬೆಂಗಳೂರು, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳ ಬಳಕೆದಾರರು ಈ ಖಾತೆಯನ್ನು ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ.
ಈ ಅಡಚಣೆಯು ಜಾಗತಿಕವಾಗಿಯೂ ಹರಡಿರುವಂತೆ ತೋರುತ್ತಿದ್ದು, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾದ ಬಳಕೆದಾರರು ಡೌನ್‌ಡೆಕ್ಟರ್ ವರದಿಗಳ ಗ್ರಾಫ್ ಹೆಚ್ಚಾಗುತ್ತಿದೆ.
ಪ್ಲಾಟ್‌ಫಾರ್ಮ್ ಕಾರ್ಯನಿರ್ವಹಿಸದ ಬಗ್ಗೆ X ಬಳಕೆದಾರರು ಏನು ಹೇಳುತ್ತಿದ್ದಾರೆ?
ಎಕ್ಸ್ನಲ್ಲಿ ಅಡಚಣೆ ಉಂಟಾದ ಬೆನ್ನಲ್ಲೇ ಹಲವಾರು ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ, ಕೆಲವು ಬಳಕೆದಾರರು ಸತತ ಅಡಚಣೆಗಳಿಂದ ಸಿಟ್ಟಾಗಿದ್ದರೆ, ಇನ್ನು ಕೆಲವರು ಈ ಪರಿಸ್ಥಿತಿಯ ಬಗ್ಗೆ ಹಾಸ್ಯ ಮಾಡುತ್ತಿದ್ದಾರೆ (ಏಜೆನ್ಸೀಸ್).