ರಸ್ತೆ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ದುರಂತ; 8 ಕಾರ್ಮಿಕರು ದುರ್ಮರಣ, ಐವರಿಗೆ ಗಾಯ | Electrical disaster

ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಸೋಮವಾರ(ನ. 02) ರಸ್ತೆ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ದುರಂತ ಸಂಭವಿಸಿದ್ದು, ಘಟನೆಯಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಸ್ತೆ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ದುರಂತ; 8 ಕಾರ್ಮಿಕರು ದುರ್ಮರಣ, ಐವರಿಗೆ ಗಾಯ | Electrical disaster
Published on: 

ಜೈಪುರ: ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಸೋಮವಾರ(ನ. 02) ರಸ್ತೆ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ದುರಂತ ಸಂಭವಿಸಿದ್ದು, ಘಟನೆಯಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಉದಯಪುರವಾಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಾಪೋಲಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಛಾಪೋಲಿ ಮತ್ತು ಕದಮ್‌ಕುಂಡ್ ಅನ್ನು ಸಂಪರ್ಕಿಸುವ ಕಿರಿದಾದ ರಸ್ತೆ ನಿರ್ಮಾಣ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ.

ರಸ್ತೆ ನಿರ್ಮಾಣಕ್ಕೆ ಬಳಸುತ್ತಿದ್ದ ಯಂತ್ರವೊಂದು ಮೇಲ್ಭಾಗದಲ್ಲಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಸ್ಪರ್ಶಿಸಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಐವರಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Also Read
ವಾಟ್ಸಾಪ್ ಸೇವೆ ಆರಂಭಿಸಿದ ಇಪಿಎಫ್ಓ: ಇನ್ಮುಂದೆ ವಾಟ್ಸಾಪ್​ನಲ್ಲೇ ನಿಮ್ಮ ಪಿಎಫ್​ ಬ್ಯಾಲೆನ್ಸ್​ ಚೆಕ್​ ಮಾಡಬಹುದು | EPFO
ರಸ್ತೆ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ದುರಂತ; 8 ಕಾರ್ಮಿಕರು ದುರ್ಮರಣ, ಐವರಿಗೆ ಗಾಯ | Electrical disaster

ಈ ಕುರಿತು ಮಾತನಾಡಿರುವ ಅವರು ಉದಯಪುರವಾಟಿ ಎಸ್‌ಎಚ್‌ಒ ರಾಂಪಾಲ್ ಅವರು, ಜಲ್ಲಿಕಲ್ಲು ಮಿಶ್ರಣ ಮಾಡಲು ಬಳಸುತ್ತಿದ್ದ ಯಂತ್ರವು ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ವಿದ್ಯುತ್ ಸ್ಪರ್ಶಿಸಿ ಕಾರ್ಮಿಕರು ಮೃತಪಟ್ಟಿದ್ದಾರೆ. ಎಂಟು ಕಾರ್ಮಿಕರು ಸ್ಥಳೀಯ ನಿವಾಸಿಗಳು ಎಂದು ಹೇಳಿದ್ದಾರೆ.

ಇನ್ನೂ ಘಟನೆ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಭಜನ್ ಲಾಲ್ ಶರ್ಮಾ, ಮೃತ ಕಾರ್ಮಿಕರಿಗೆ ಸಂತಾಪ ಸೂಚಿಸಿದ್ದಾರೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಜಿಲ್ಲಾಧಿಕಾರಿಯಿಂದ ವಿಸ್ತೃತ ವರದಿಯನ್ನು ಕೋರಿದ್ದಾರೆ. ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಧಾನಿ ಮೋದಿಯವರು ಸಹ, ಅವಘಡದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಸಂತಾಪ ಸೂಚಿಸಿದ್ದು, ಮೃತಪಟ್ಟ ಪ್ರತಿಯೊಬ್ಬರ ಕುಟುಂಬದವರಿಗೂ 'ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ'ಯಿಂದ (PMNRF) ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಘೋಷಿಸಿದ್ದಾರೆ (ಏಜೆನ್ಸೀಸ್).