ಚುನಾವಣಾ ಹಿಂದೂಗಳು: ಅಖಿಲೇಶ್ ಯಾದವ್​ ಅಯೋಧ್ಯೆ ಭೇಟಿಗೆ ಬಿಜೆಪಿ ಸಂಸದ ರವಿ ಕಿಶನ್ ಟೀಕೆ | Ravi Kishan

ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬಿಜೆಪಿ ಸಂಸದ ರವಿ ಕಿಶನ್ ಭಾನುವಾರ(ನ. 08) ಟೀಕಿಸಿದ್ದಾರೆ. ಮತ್ತು ಅವರನ್ನು ಚುನಾವಣಾ ಹಿಂದೂಗಳು ಎಂದು ಕರೆದಿದ್ದು, ಜನರು ಇದನ್ನು ನೋಡುತ್ತಾರೆ ಎಂದು ಹೇಳಿದ್ದಾರೆ.
ಚುನಾವಣಾ ಹಿಂದೂಗಳು: ಅಖಿಲೇಶ್ ಯಾದವ್​ ಅಯೋಧ್ಯೆ ಭೇಟಿಗೆ ಬಿಜೆಪಿ ಸಂಸದ ರವಿ ಕಿಶನ್ ಟೀಕೆ | Ravi Kishan
Published on: 

ಲಖನೌ: ಮುಂದಿನ ತಿಂಗಳು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬಿಜೆಪಿ ಸಂಸದ ರವಿ ಕಿಶನ್ ಭಾನುವಾರ(ನ. 08) ಟೀಕಿಸಿದ್ದಾರೆ. ಮತ್ತು ಅವರನ್ನು ಚುನಾವಣಾ ಹಿಂದೂಗಳು ಎಂದು ಕರೆದಿದ್ದು, ಜನರು ಇದನ್ನು ನೋಡುತ್ತಾರೆ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಖಿಲೇಶ್ ಯಾದವ್ ಅವರು ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಈಗಷ್ಟೇ ಕೇಳಿದೆ. ಹೋಗುವಾಗ ಅವರು ತಮ್ಮ ಹಿರಿಯ ಸಹೋದರ ರಾಹುಲ್ ಗಾಂಧಿಯವರನ್ನೂ ಜೊತೆಗೆ ಕರೆದೊಯ್ಯಲಿ. ಮತ್ತು ಕರ ಸೇವಕರ ಕ್ಷಮೆ ಕೇಳಬೇಕು ಎಂದಿದ್ದಾರೆ.

ಅವರ ತಾಯಿ ಶ್ರೀರಾಮ ಕೇವಲ ಕಲ್ಪನೆ ಎಂದು ನಂಬಿದ್ದರು. ಅಲ್ಲಿಗೆ ತೆರಳುವ ಮುನ್ನ ನೀವು ಕರಸೇವಕರ ಕ್ಷಮೆ ಕೇಳಬೇಕು. ನೀವು ಚುನಾವಣಾ ಉದ್ದೇಶದಿಂದಲ್ಲ, ಬದಲಾಗಿ ಭಾವಪೂರ್ಣ ಭಕ್ತಿಯಿಂದ ಅಲ್ಲಿಗೆ ಹೋಗಬೇಕು. ವಿಪಕ್ಷಗಳ ನಾಯಕರು ಅಲ್ಲಿಗೆ ಹೋಗುತ್ತಿರುವುದು ಕೇವಲ ರಾಜಕೀಯ ಲೆಕ್ಕಾಚಾರಗಳಿಂದ ಕೂಡಿದೆ ಎಂದು ಹೇಳಿದ್ದಾರೆ.

Also Read
ಎಲ್ಲಾ ಡಾಟ್ ಹೆಡ್​ಗಳನ್ನು ಗಡಿಪಾರು ಮಾಡಿ: ಅಮೆರಿಕದಲ್ಲಿ ದೀಪಾವಳಿ ಆಚರಣೆಗೆ ಅಡ್ಡಿಪಡಿಸಿದ ಕ್ರಿಶ್ಚಿಯನ್ ಬಲಪಂಥೀಯ ಕಾರ್ಯಕರ್ತರು | America
ಚುನಾವಣಾ ಹಿಂದೂಗಳು: ಅಖಿಲೇಶ್ ಯಾದವ್​ ಅಯೋಧ್ಯೆ ಭೇಟಿಗೆ ಬಿಜೆಪಿ ಸಂಸದ ರವಿ ಕಿಶನ್ ಟೀಕೆ | Ravi Kishan

ಇನ್ನೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಡಿಸೆಂಬರ್ ಮಧ್ಯಭಾಗದಲ್ಲಿ ಅಖಿಲೇಶ್ ಯಾದವ್ ಅವರು ಮೊದಲ ಬಾರಿಗೆ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ.

ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಅವರ ಪ್ರಕಾರ, ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಅವರು ಡಿಸೆಂಬರ್ 12 ರಂದು ಅಯೋಧ್ಯೆಯ ರಾಮ ಮಂದಿರ ಹಾಗೂ ಹನುಮಾನ್‌ಗಢಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. 2024ರ ಜನವರಿಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ನಡೆದ ನಂತರ, ಅಖಿಲೇಶ್ ಅವರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ (ಏಜೆನ್ಸೀಸ್).