ಮಂಗಳವಾರ(ಜ. 13) ಸಚಿವಾಲಯ ನಬನ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಆಯೋಗ ಏಕಪಕ್ಷೀಯವಾಗಿ 54 ಲಕ್ಷ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಅಳಿಸಿದೆ. ಹಾಗೆ ಪಟ್ಟಿಯಿಂದ ಡಿಲೀಟ್ ಆದವರು ಹೆಚ್ಚಿನವರು ನಿಜವಾದ ಮತದಾರರು ಎಂದು ಹೇಳಿದ್ದಾರೆ.