ನೆರೆಹೊರೆಯವರ ಖಾಸಗಿ ಕ್ಷಣಗಳನ್ನು ಸೆರೆಹಿಡಿಯಲು ಪ್ರಾಣವನ್ನೇ ಪಣಕ್ಕಿಟ್ಟ ವೃದ್ಧ! ವಿಡಿಯೋ ವೈರಲ್ Apartment Security

Apartment Security  (ಚಿತ್ರ X)
Apartment Security (ಚಿತ್ರ X)
Published on
Apartment Security: ವಸತಿ ಸಮುಚ್ಚಯಗಳು (Apartments) ಎಂದರೆ ಅಲ್ಲಿ ಕಟ್ಟುನಿಟ್ಟಿನ ಭದ್ರತೆ ಇರುತ್ತದೆ ಎಂದು ಜನರು ಭಾವಿಸಿರುತ್ತಾರೆ. ಆದರೆ, ತೀರಾ ಸುರಕ್ಷಿತ ಎನ್ನಲಾಗುವ ಅಪಾರ್ಟ್​ಮೆಂಟ್​ವೊಂದರಲ್ಲಿ ವೃದ್ಧರೊಬ್ಬರು ನೆರೆಮನೆಯವರಿಗೆ ತಿಳಿಯದಂತೆ ಅವರ ಖಾಸಗಿ ಕ್ಷಣಗಳನ್ನು ತಮ್ಮ ಮೊಬೈಲ್​ ಫೋನ್​ನಲ್ಲಿ ರೆಕಾರ್ಡ್​ ಮಾಡುತ್ತಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 
ವರದಿಗಳ ಪ್ರಕಾರ, ಈ ಕೃತ್ಯವು ಒಂದೇ ದಿನದಲ್ಲಿ ನಡೆದಿದ್ದಲ್ಲ. ಕಳೆದ ಹಲವಾರು ದಿನಗಳಿಂದಲೇ ಆ ಕಟ್ಟಡದ ಸುತ್ತಮುತ್ತ ಕೆಲವು ಅನುಮಾನಾಸ್ಪದ ಚಲನವಲನಗಳು ನಡೆಯುತ್ತಿರುವುದನ್ನು ನಿವಾಸಿಗಳು ಗಮನಿಸಿದ್ದರು. ಆದರೆ ಆರಂಭದಲ್ಲಿ, ನೆರೆಹೊರೆಯವರೇ ಆದ ಕಾರಣ ಆ ಚಟುವಟಿಕೆಯನ್ನು ತೀರಾ ಸಾಮಾನ್ಯ ಎಂದು ಭಾವಿಸಿ ನಿವಾಸಿಗಳು ತಳ್ಳಿಹಾಕಿದ್ದರು. 
ಆದರೆ, ದಿನ ಕಳೆದಂತೆ ಕೆಲವು ನಿವಾಸಿಗಳಿಗೆ ತಮಗೇ ತಿಳಿಯದಂತೆ ಯಾರೋ ತಮ್ಮನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಭದ್ರತಾ ರೆಕಾರ್ಡ್​ಗಳನ್ನು ಪರಿಶೀಲಿಸಲು ನಿರ್ಧರಿಸಿದರು.

ಆಘಾತಕಾರಿ ನಡವಳಿಕೆ ದೃಶ್ಯಗಳು ಬಹಿರಂಗ

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದೇ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುವ ವೃದ್ಧ ವ್ಯಕ್ತಿಯೊಬ್ಬರು ನೆರೆಯವರ ಬಾಲ್ಕನಿ ಬಳಿಯ ನಿರ್ಬಂಧಿತ ಪ್ರದೇಶಕ್ಕೆ ರಹಸ್ಯವಾಗಿ ಪ್ರವೇಶಿಸುತ್ತಿದ್ದ ದೃಶ್ಯಗಳು ಅಲ್ಲಿ ದಾಖಲಾಗಿದ್ದವು. ಜೊತೆಗೆ ಅವರ ಒಪ್ಪಿಗೆಯಿಲ್ಲದೆ ಅವರ ದಿನಚರಿ ಹಾಗೂ ಖಾಸಗಿ ಕ್ಷಣಗಳನ್ನು ಮೊಬೈಲ್​ಗಳಲ್ಲಿ  ರೆಕಾರ್ಡ್ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ವಸತಿ ಸಮಯದಾಯದಲ್ಲಿ ಬೇಗನೆ ಚರ್ಚೆಯ ವಿಷಯವಾಯಿತು. ಅಲ್ಲಿನ ನಿವಾಸಿಗಳು ಈ ದೃಶ್ಯದ ಬಗ್ಗೆ ಕೋಪವನ್ನು ವ್ಯಕ್ತಪಡಿಸಿದ್ದು, ಸುರಕ್ಷಿತ, ಸುಭದ್ರವೆಂದು ಪರಿಗಣಿಸಲಾದ ಇಂತಹ ಸ್ಥಳದಲ್ಲಿ ಈ ರೀತಿಯಂತಹ ಘಟನೆ ನಡೆಯುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. 
ಈ ರೀತಿಯ ಘಟನೆಗಳು ವಸತಿ ಸಮಾಜಗಳಲ್ಲಿ ಗೌಪ್ಯತೆ ಮತ್ತು ಕಣ್ಗಾವಲಿನ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದ್ದು, ಇಂತಹ ಘಟನೆಗಳನ್ನು ಗಮನಿಸದಿದ್ದರೆ, ಅದು ನೆರೆಹೊರೆಯವರಲ್ಲಿ ಅಭದ್ರತೆ ಮತ್ತು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸಬಹುದು ಎಂದು ಅನೇಕ ನಿವಾಸಿಗಳು ಭಯಪಡುತ್ತಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net