ಪಿಂಚಣಿ ಹಣಕ್ಕೆಂದು ಬಂದ ಅಜ್ಜನಿಗೆ ಕಾದಿತ್ತು ಬಿಗ್​ ಸರ್ಪ್ರೈಸ್​​​: ಬ್ಯಾಂಕ್​ ಖಾತೆಯಲ್ಲಿ 1500 ಕೋಟಿ ಹಣ! ಮುಂದೇನಾಯ್ತು?

ಘಟನೆಯ ದೃಶ್ಯ
ಘಟನೆಯ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಪಿಂಚಣಿ ಹಣ ಸಿಕ್ಕಿದ್ರೆ ಸಾಕು ಎಂದ ಅಜ್ಜಿನಗೆ ಬಿಗ್ ಸರ್ಪ್ರೈಸ್
  • ಬ್ಯಾಂಕ್​ ಖಾತೆಗೆ ಬಂದಿದ್ದು ಬರೋಬ್ಬರಿ 1500 ಕೋಟಿ ರೂ.
  • ತಂದೆ ಮತ್ತು ಮಗನ ಖಾತೆಯಲ್ಲಿ ಭಾರಿ ಮೊತ್ತದ ಹಣ
Pension Money: ಪಿಂಚಣಿ ಹಣಕ್ಕಾಗಿ ಕಾದು ಕೂರುವ ಹಿರಿಯ ಜೀವಗಳು, ತಮ್ಮ ಔಷಧಿ ಸೇರಿ ಉಳಿತಾಯಕ್ಕೆ ಒಂದಷ್ಟು ಹಣ ಸೇರಿಸುವ ಸಣ್ಣ ನಿರೀಕ್ಷೆಯಲ್ಲಿ ಜೀವನ ತಳ್ಳುತ್ತಿರುತ್ತಾರೆ. ಮಕ್ಕಳ ಬಳಿ ದುಡ್ಡ ಕೇಳಲು ಸಂಕೋಚ ಪಡುವ ವೃದ್ಧರು, ಈ ಪೆನ್ಶನ್​ ಹಣದಲ್ಲೇ ತಮ್ಮ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸುತ್ತಾರೆ. ಹೀಗಿರುವಾಗಲೇ, ತಿಂಗಳ ಪಿಂಚಣಿ ಬಂತೇ ಎಂದು ಬ್ಯಾಂಕ್ ಖಾತೆ ಚೆಕ್​ ಮಾಡಲು ಹೋದ ಈ ಅಜ್ಜನಿಗೆ 1500 ಕೋಟಿ ರೂ. ಕಂಡು ಒಂದು ನಿಮಿಷ ಖುಷಿ, ಆಶ್ಚರ್ಯ, ಗೊಂದಲ ಎಲ್ಲವೂ ಏಕಕಾಲಕ್ಕೆ ಉಂಟಾದ ಘಟನೆ ಬಿಹಾರದಲ್ಲಿ ವರದಿಯಾಗಿದೆ. 
ಮುಜಾಫರ್‌ಪುರದ 82 ವರ್ಷದ ವ್ಯಕ್ತಿ ಕಾಮೇಶ್ವರ ಮಿಶ್ರಾ ಎಂಬುವವರು ತಮ್ಮ ಪಿಂಚಣಿ ಹಣವನ್ನು ಡ್ರಾ ಮಾಡಿಕೊಳ್ಳಲು ಊರಿನ ಸೇವಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಹಣವನ್ನು ಹಿಂಪಡೆದ ಬಳಿಕ ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವಂತೆ ಸಿಬ್ಬಂದಿಯನ್ನು ಕೇಳಿದಾಗ, ಒಟ್ಟು 759 ಕೋಟಿ ರೂ. ಇತ್ತು. ಇದರಿಂದ ಗಾಬರಿಗೊಂಡ ಹಿರಿಯ, ತಕ್ಷಣವೇ ಪಕ್ಕದಲ್ಲೇ ನಿಂತಿದ್ದ ಆತನ ಅಂಗವಿಕಲ ಮಗನ ಖಾತೆಯನ್ನು ಪರಿಶೀಲಿಸಲು ಕೇಳಿದರು. ಆಗ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಈ ಖಾತೆಯಲ್ಲೂ 759 ಕೋಟಿ ರೂ. ಹಣವಿತ್ತು. 
ಸಿಎಸ್‌ಸಿ ಸಿಬ್ಬಂದಿ ಕೂಡಲೇ ಪೊಲೀಸರು ಹಾಗೂ ಬ್ಯಾಂಕ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ಖಾಕಿ, ಒಂದೇ ಕುಟುಂಬಕ್ಕೆ ಸೇರಿದ ಇಬ್ಬರ ಖಾತೆಯಲ್ಲಿ 1,500 ಕೋಟಿ ರೂ. ಹೇಗೆ ಬಂತು? ಇದರಲ್ಲಿ ಬ್ಯಾಂಕಿನವರದ್ದು ಏನಾದರೂ ತಾಂತ್ರಿಕ ದೋಷವಿದೆಯಾ ಎಂದು ಒಮ್ಮೆ ಪರಿಶೀಲಿಸಿದರು.
ಮಾಹಿತಿ ಕಲೆಹಾಕಿದ ಬ್ಯಾಂಕ್ ಸಿಬ್ಬಂದಿ, ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ಈ ಎರಡು ಖಾತೆಗಳಿಗೆ ಇಷ್ಟು ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಿದೆ ಹೊರತು ಹಣ ಅವರವರ ಖಾತೆಗೆ ಹೋಗಿಲ್ಲ. ಟೆಕ್ನಿಕಲ್​ ಸಮಸ್ಯೆಯಿಂದ ಕೇವಲ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಅಷ್ಟೇ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿದ ಕೆಲವೇ ನಿಮಿಷಗಳಲ್ಲಿ ಎರಡೂ ಖಾತೆಯಿಂದ 739 ಕೋಟಿ ಸಂಖ್ಯೆ ಮಾಯವಾಗಿತ್ತು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net