2022 ರಲ್ಲಿ ಅವಿಭಜಿತ ಶಿವಸೇನೆಯಲ್ಲಿನ ವಿಭಜನೆಯ ಬಳಿಕ ಪಕ್ಷವು ಸತತ ಪಕ್ಷಾಂತರಗಳಿಗೆ ಸಾಕ್ಷಿಯಾಗಿದ್ದು, 2017 ರಲ್ಲಿ ಆಯ್ಕೆಯಾದ ಅವಿಭಜಿತ ಶಿವಸೇನೆಯ 84 ಬಿಎಂಸಿ ಕಾರ್ಪೊರೇಟರ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಸೇರ್ಪಡೆಗೊಂಡರು, ಇದು ಉದ್ಧವ್ ಠಾಕ್ರೆ ಬೆಂಬಲದ ನೆಲೆಯನ್ನು ಕ್ಷೀಣಿಸುವಂತೆ ಮಾಡಿತು. ದೊಡ್ಡ ಹೊಡೆತ ತಿಂದರೂ ಸುಧಾರಿಸಿಕೊಂಡ ಉದ್ಧವ್, ಹೊಸ ತಂಡ ರಚಿಸಿ ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.