ಉಜ್ಬೇಕಿಸ್ತಾನ್ ಎದುರು 19-0 ಅಂತರದ ಗೆಲುವು; ಏಷ್ಯನ್​ ಗೇಮ್ಸ್​ನಲ್ಲಿ 8 ಗೋಲ್ ಬಾರಿಸಿ ದೀಪಿಕಾ ಐತಿಹಾಸಿಕ ದಾಖಲೆ | Asian Games

ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ
Published on: 

ಪ್ರಮುಖ ಮುಖ್ಯಾಂಶಗಳು

  • ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟ
  • ಉಜ್ಬೇಕಿಸ್ತಾನ್ ಎದುರು 19-0 ಅಂತರದ ಭರ್ಜರಿ ಗೆಲುವು ಸಾಧಿಸಿದ ಭಾರತ
ನಗೋಯಾ: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ (Asian Games) ಉಜ್ಬೇಕಿಸ್ತಾನ್ ಎದುರು 19-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ಇಂದು ನಡೆದ ಪಂದ್ಯದಲ್ಲಿ ಭಾರತದ ತಂಡವು ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಪೂಲ್ ಬಿ (Pool B) ವಿಭಾಗದ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ ಬರೋಬ್ಬರಿ 19-0 ಗೋಲುಗಳ ಅಂತರದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿತು. ವಿಶೇಷ ಎಂದರೆ, ಈ ಪಂದ್ಯದಲ್ಲಿ ತಂಡದ ಪರ ದೀಪಿಕಾ ಸೆಹ್ರಾವತ್ ಅವರೊಬ್ಬರೇ ಬರೋಬ್ಬರಿ 8 ಗೋಲುಗಳನ್ನು ಬಾರಿಸುವ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಎಂಬ ಸಾರ್ವಕಾಲಿಕ ಐತಿಹಾಸಿಕ ದಾಖಲೆ ನಿರ್ಮಿಸಿರುವ ದೀಪಿಕಾ, ಶುಭಾರಂಭ ಪಂದ್ಯದಲ್ಲೇ ಗೋಲುಗಳ ಮಳೆ ಸುರಿಸಿದ್ದು ನೋಡುಗರ ಗಮನ ಸೆಳೆಯಿತು. ಪಂದ್ಯದ ಆರಂಭದಿಂದಲೇ ಉಜ್ಬೇಕಿಸ್ತಾನ್ ತಂಡದ ಮೇಲೆ ಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತ, ಮೊದಲಾರ್ಧದಲ್ಲೇ 8 ಗೋಲುಗಳನ್ನು ಬಾರಿಸಿ ಎದುರಾಳಿ ತಂಡದ ಗೆಲುವಿನ ಹಾದಿಯನ್ನು ಸಂಪೂರ್ಣವಾಗಿ ಬ್ಲಾಕ್​ ಮಾಡಿತು.

ಅತ್ಯಧಿಕ ಗೋಲು ಬಾರಿಸಿದವರ ಪಟ್ಟಿ

ದೀಪಿಕಾ ಸೆಹ್ರಾವತ್ (8 ಗೋಲು): 8, 22, 25, 33, 36, 38, 41, 54 (ನಿಮಿಷ)
ಇಶಿಕಾ (3 ಗೋಲು): 11, 42 ಮತ್ತು 54
ನವನೀತ್ ಕೌರ್ (2 ಗೋಲು): 23 ಮತ್ತು 45
ಲಾಲ್ತಂಟ್ಲುಂಗಿ (2 ಗೋಲು): 43 ಮತ್ತು 51
ಲಾಲ್ರೆಮ್ಸಿಯಾಮಿ (1 ಗೋಲು): 7
ಬಲ್ಜೀತ್ ಕೌರ್ (1 ಗೋಲು): 12
ನೇಹಾ (1 ಗೋಲು): 18
ಸಾಕ್ಷಿ ರಾಣಾ (1 ಗೋಲು): 43

ಸವಿತಾ ಪುನಿಯಾ ಹೆಸರಿಗೆ ಮತ್ತೊಂದು ಗರಿ

ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಹಾಗೂ ಗೋಲ್‌ಕೀಪರ್ ಸವಿತಾ ಪುನಿಯಾಗೆ ಇದು 320ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಮೂಲಕ ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಂದನಾ ಕಟಾರಿಯಾ ಅವರ ದಾಖಲೆಯನ್ನು ಸವಿತಾ ಸರಿಗಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net