ಅಲ್ಲದೆ, ವಿಶ್ವದಲ್ಲೇ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಹೀಗಿದ್ದರೂ, ಸುಂಕ ಬೆದರಿಕೆಯಿಂದ ಭಾರತವನ್ನು ಮಣಿಸಬಹುದು ಎಂದು ಟ್ರಂಪ್ ಅಂದುಕೊಂಡಿದ್ದರೆ ಅದು ಮಹಾಪ್ರಮಾದವೇ ಸರಿ. ಮಾತ್ರವಲ್ಲ, ಟ್ರಂಪ್ ಜಾರಿಗೊಳಿಸುತ್ತಿರುವ ಅವೈಜ್ಞಾನಿಕ ಸುಂಕ ನೀತಿಯಿಂದ ಅಮೆರಿಕದ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಆರ್ಥಿಕ ಬೆಳವಣಿಗೆ ವೇಗ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕದ ವಿತ್ತೀಯ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ವಾಣಿಜ್ಯ ಸಮರದ ಭರದಲ್ಲಿ ಭಾರತ-ಅಮೆರಿಕ ನಡುವಿನ ಹಳೆಯ ಸ್ನೇಹ ಮತ್ತು ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ಆಗದಿರಲಿ.