ಈ ವೈಫಲ್ಯಕ್ಕೆ ಪ್ರಮುಖ ಕಾರಣ, ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸಂಪನ್ಮೂಲ ಕೊರತೆ. ಸಾಂಸ್ಥಿಕ ಸಾಲದ ಪ್ರಮುಖ ಆಕರವಾಗಿದ್ದ ನಬಾರ್ಡ್ ಕಳೆದ ವರ್ಷ ಪುನರ್ಧನ ಸಾಲದ ಮೊತ್ತವನ್ನು ಶೇ. 58ರಷ್ಟು ಇಳಿಸಿತ್ತು. ಇದರ ಪರಿಣಾಮ, ಲಕ್ಷಾಂತರ ರೈತರು ಕಳೆದ ವರ್ಷ ಸಾಲದಿಂದ ವಂಚಿತರಾದರು. ಈ ವರ್ಷವೂ ಪರಿಸ್ಥಿತಿ ಸುಧಾರಿಸಿಲ್ಲ. ಬಜೆಟ್ನಲ್ಲಿ ಘೊಷಿಸಿದ ಗುರಿಯನ್ನು ತಲುಪಲು ಸಹಕಾರ ಸಂಘಗಳಿಗೆ ಅಗತ್ಯವಾದ ಪರ್ಯಾಯ ಸಂಪನ್ಮೂಲ ಹರಿವಿನ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ರಾಜ್ಯದಲ್ಲಿ 6,025 ಸಹಕಾರ ಸಂಘಗಳಿದ್ದು, 53.50 ಲಕ್ಷ ರೈತರು ಸದಸ್ಯರಾಗಿದ್ದಾರೆ.