

ಈ ಸಲದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯ ತರುವಾಯ, ರಾಜಕೀಯ ಪಕ್ಷಗಳು ಯುವಜನರತ್ತ ವಿಶೇಷ ಗಮನಹರಿಸಲು ಮುಂದಾಗಿರುವುದು ಸ್ಪಷ್ಟ ಗೋಚರ. ರಾಜಕೀಯ ನಾಯಕರ ಮಾತು ಮತ್ತು ಕೃತಿಗಳಲ್ಲಿ ಇದು ಕಂಡುಬರುತ್ತಿದೆ. ಆದರೆ ಈ ಗಮನವು ಕೇವಲ ತಾತ್ಕಾಲಿಕ ಪ್ರಯೋಜನದ ಉದ್ದೇಶವನ್ನು ಹೊಂದಿರದೆ, ನಿಜಾರ್ಥದಲ್ಲಿ ಯುವಜನರ ಬಗ್ಗೆ ಕಾಳಜಿ ವ್ಯಕ್ತವಾಗಬೇಕಾದ್ದು ಅಗತ್ಯ. ಯುವಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅವರೊಂದಿಗೆ ಸಂವಹನವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು "ಒಂದು ದಿನ ಒಂದು ವಿಶ್ವವಿದ್ಯಾಲಯ" ಕಾರ್ಯಕ್ರಮವನ್ನು ರೂಪಿಸಿದೆ.