2070ರ ಹೊತ್ತಿಗೆ ನೆಟ್ ಝೀರೋ ಸಾಧಿಸುವುದಾಗಿ, ಗ್ಲಾಸ್ಗೋದಲ್ಲಿ 2021ರಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಭಾರತ ಘೋಷಿಸಿದೆ. ಈ ಗುರಿ ಸಾಧನೆ ನಿಟ್ಟಿನಲ್ಲಿ, ಇಂಧನ, ಸಾರಿಗೆ, ಕೈಗಾರಿಕೆ ಇತ್ಯಾದಿ ಪ್ರಮುಖ ರಂಗಗಳಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಯೋಜನೆಗಳು ಬೇಕಾಗುತ್ತವೆ. ಇದಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಭಾರತ ಒತ್ತುನಿಡಿರುವುದು ಈ ನೀತಿಗೆ ಪೂರಕವಾಗಿದೆ. "2070ರ ವೇಳೆಗೆ ನೆಟ್ ಝೀರೋ ಸಾಧಿಸುವುದಕ್ಕೆ ಬದ್ಧರಾಗಿದ್ದೇವೆ' ಎಂದು ಅನಂತ ನಾಗೇಶ್ವರನ್ ಸಹ ಹೇಳಿದ್ದಾರೆ.