1947ರಿಂದ 1971ರ ಅವಧಿಯು ಮೂಲಭೂತ ಸಂರ್ಷಗಳ ಯುಗವಾಗಿತ್ತು. 1972ರಿಂದ 1989ರ ಅವಧಿಯಲ್ಲಿ ಪರೋಕ್ಷ ಯುದ್ಧ ಹೆಚ್ಚಾಗಿತ್ತು. 1990ರಿಂದ 2000ದ ಅವಧಿಯಲ್ಲಿ ಸಂಘರ್ಷ ಇನ್ನಷ್ಟು ಉಲ್ಬಣಗೊಂಡಿತು. 2001ರಿಂದ 2009ರವರೆಗೆ ಭಾರತದ ಪ್ರಮುಖ ಸ್ಥಾನಗಳನ್ನು, ಸ್ವತ್ತುಗಳನ್ನು ಪಾಕ್ ಪ್ರಾಯೋಜಿತ ಭಯೋತ್ಪಾದಕ ಸಂಟನೆಗಳು ಗುರಿ ಮಾಡಿದವು. 2010ರಿಂದ 2025ರವೆರಗೆ ಭಯೋತ್ಪಾದನೆಯ ರೂಪಾಂತರ ಮತ್ತು ಭಾರತದಿಂದ ತಕ್ಕ ಪ್ರತ್ಯುತ್ತರ ಕಂಡುಬಂತು ಎಂದು ವಿವರಿಸಿರುವ ವರದಿ, ಪಾಕಿಸ್ತಾನ ತನ್ನ ಕಾರ್ಯತಂತ್ರಗಳನ್ನು ಬದಲಿಸುತ್ತ ಭಯೋತ್ಪಾದನೆ ನೀತಿಯನ್ನು ಹೆಚ್ಚು ಕಠಿಣಗೊಳಿಸುತ್ತ ಬಂದಿದೆ ಎಂದು ತಿಳಿಸಿದೆ. ಇದು ಪಾಕ್ನ ಧೂರ್ತತನಕ್ಕೆ ಸಾಕ್ಷಿಯಾಗಿದ್ದು, ಆ ರಾಷ್ಟ್ರ ಎಂದೂ ಬದಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.