ರಷ್ಯಾ-ಯುಕ್ರೇನ್ ಯುದ್ಧ ಅಥವಾ ಅಮೆರಿಕ-ಚೀನಾ ಶೀತಲ ಸಮರದ ನಡುವೆಯೂ ಭಾರತವು ಯಾವುದೇ ಒಂದು ಬಣಕ್ಕೆ ವಾಲದೆ, ತನ್ನ ಸ್ವತಂತ್ರ ನಿಲುವನ್ನು ಕಾಯ್ದುಕೊಂಡಿದೆ. ಇದು ಭಾರತವನ್ನು ಎಲ್ಲರನ್ನೂ ಒಳಗೊಳ್ಳುವ ಮಿತ್ರನಾಗಿಸಿ, ವಿಶ್ವಬಂಧು ಆಗಿ ಬಿಂಬಿಸಿದೆ. ಭಾರತವು ಆರ್ಥಿಕತೆಯಲ್ಲಿ ಕೂಡ ಮುಂದಡಿ ಇಟ್ಟಿದ್ದು, ವಿತ್ತೀಯ ಬೆಳವಣಿಗೆ ದರ (ಜಿಡಿಪಿ) ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಹೆಚ್ಚಿರುವುದು ಸಾಮಾನ್ಯ ಸಂಗತಿಯೇನಲ್ಲ. ಕ್ವಾಡ್ (ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಭಾರತ) ಕೂಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹಿಂದೂ ಮಹಾಸಾಗರ ವಲಯದಲ್ಲಿ ಶಾಂತಿ ಕಾಪಾಡುವಲ್ಲಿ ಭಾರತದ ಪಾತ್ರವನ್ನು ಜಗತ್ತು ನಂಬುತ್ತಿದೆ.