ಈ ಜಾಲ ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ಪ್ರಮುಖ ರಾಜ್ಯಗಳಲ್ಲಿ ಹರಡಿಕೊಂಡಿರುವುದು ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಗಂಭೀರ ವಿಷಯ. ಬಂಧಿತ ಆರೋಪಿಗಳು ಯುವಕರನ್ನು ಆನ್ಲೈನ್ ವಿಡಿಯೋಗಳ ಮೂಲಕ ತೀವ್ರಗಾಮಿ ಚಿಂತನೆಗಳಿಗೆ ಪ್ರೇರೇಪಿಸುತ್ತಿರುವುದು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವಿದೇಶಿ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕದಲ್ಲಿರುವುದು ತನಿಖೆಯಿಂದ ಬಹಿರಂಗವಾಗಿದೆ. ತಾಂತ್ರಿಕತೆಯನ್ನು ಬಳಸಿಕೊಂಡು ಯುವಮನಸ್ಸುಗಳನ್ನು ವಿಷಪೂರಿತಗೊಳಿಸುತ್ತಿರುವುದು ಡಿಜಿಟಲ್ ಯುಗದ ದೊಡ್ಡ ಸವಾಲಾಗಿದೆ.