ಪಂಜಾಬ್ ಆಪ್ ಸಚಿವ ಸಂಜೀವ್ ಅರೋರಾ ಮನೆ ಮೇಲೆ ಮೂರನೇ ಬಾರಿ ಇಡಿ ದಾಳಿ | ED Raid

ಸಂಜೀವ್ ಅರೋರಾ
ಸಂಜೀವ್ ಅರೋರಾ
Published on
ಚಂಡೀಗಢ: ಪಂಜಾಬ್​ನ ಆಪ್ ಸರ್ಕಾರದಲ್ಲಿ ಕೈಗಾರಿಕೆ ಮತ್ತು ವಿದ್ಯುತ್ ಸಚಿರಾಗಿರುವ ಸಂಜೀವ್ ಅರೋರಾ ಮೇಲೆ ಇಂದು(ಮೇ 09) ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದೆ. ಈ ವರ್ಷದಲ್ಲಿ ಅವರ ಮನೆ ಮೇಲೆ ನಡೆದ ಮೂರನೇ ದಾಳಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಫೆಮಾ ಕಾಯ್ದೆಯಡಿ ತನಿಖೆ ನಡೆಯುತ್ತಿದ್ದು, ಅದರ ಭಾಗವಾಗಿ ಬೆಳಿಗ್ಗೆ 5 ಗಂಟೆಗೆ ಚಂಡೀಗಢದಲ್ಲಿರುವ ಸಚಿವರ ಮೇಲೆ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಒಟ್ಟು 8 ವಾಹಗಳಲ್ಲಿ ಅಧಿಕಾರಿಗಳು ಆಗಮಿಸಿದ್ದಾರೆ.
ಕೈಗಾರಿಕೆಗಳಿಗೆ ಹಂಚಿಕೆಯಾದ ಭೂಮಿಯನ್ನು ವಸತಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದು, ಈ ಸಂಬಂಧ ಹಣ ವರ್ಗಾವಣೆಯ ವಿಷಯದ ಬಗ್ಗೆ ಸಂಜೀವ್ ಅರೋರಾ ಅವರನ್ನು ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಅರೋರಾ, ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.

ಇಡಿ ದಾಳಿ ವಿರುದ್ಧ ಆಪ್ ಆಕ್ರೋಶ

ಸಂಜೀವ್ ಅರೋರಾ ಅವರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿದ ಹಿನ್ನೆಲೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಬಂಗಾಳ ಚುನಾವಣೆ ಮುಗಿದ ಕೂಡಲೇ ಮೋದಿಜಿ ಪಂಜಾಬ್‌ನಲ್ಲಿ ದೈನಂದಿನ ಇಡಿ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರ ಪಂಜಾಬ್ ಮತ್ತು ಪಂಜಾಬಿಗಳನ್ನು ವಿವಿಧ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಜೀ ದೇಶದ ವಿವಿಧ ಭಾಗಗಳನ್ನು ಅಪ್ರಾಮಾಣಿಕವಾಗಿ ಆಕ್ರಮಿಸಿಕೊಂಡಿದ್ದಾರೆ. ಮತ್ತು ಈಗ ಪಂಜಾಬ್ ತಲುಪಿದ್ದಾರೆ. ಸಿಖ್ ಗುರುಗಳ ತ್ಯಾಗಗಳಿಂದ ಸ್ಫೂರ್ತಿ ಪಡೆದ ಪಂಜಾಬ್, ಮೋದಿ ಜೀ ಅವರ ಚಿತ್ರಹಿಂಸೆಯನ್ನು ಎದುರಿಸುತ್ತದೆ. ಅದರಿಂದ ದೇಶವನ್ನು ರಕ್ಷಿಸುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net