ಪಿಣರಾಯಿ ವಿಜಯನ್ ಪುತ್ರಿಗೆ ED ಬಿಗ್ ಶಾಕ್: ಜೂನ್​ 29 ಕ್ಕೆ ವಿಚಾರಣೆಗೆ ಹಾಜರಾಗಲು ವೀಣಾಗೆ ಸಮನ್ಸ್​ ಜಾರಿ! ED Summons Veena Vijayan

ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾಗೆ ಇಡಿ ಬಿಗ್ ಶಾಕ್!
ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾಗೆ ಇಡಿ ಬಿಗ್ ಶಾಕ್!
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾಗೆ ಇಡಿ ಬಿಗ್ ಶಾಕ್!
  • ಬ್ಯಾಂಕ್​ ಖಾತೆಗಳ ಫ್ರೀಜ್ ಬೆನ್ನಲ್ಲೇ ಜೂನ್ 29ಕ್ಕೆ ಹಾಜರಾಗಲು ಸಮನ್ಸ್
  • 9 ಗಂಟೆಗಳ ನಿರಂತರ ವಿಚಾರಣೆ ಬಳಿಕ ಎರಡನೇ ಹಂತದ ಗ್ರಿಲ್ಲಿಂಗ್‌ಗೆ ಮುಹೂರ್ತ
ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಪುತ್ರಿ ವೀಣಾ. ಟಿ ವಿರುದ್ಧ ಜಾರಿ ನಿರ್ದೇಶನಾಲಯ (ED Summons Veena Vijayan) ಸಮನ್ಸ್​ ಜಾರಿ ಮಾಡಿದ್ದು, ಜೂನ್​ 29 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ವೀಣಾ ತಮ್ಮ ಕಂಪನಿಯಾದ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL) ಮೂಲಕ ಆರ್ಥಿಕ ಅಕ್ರಮ ಎಸೆಗಿದ್ದಾರೆ ಎಂಬ ದೂರಿನ ಅನ್ವಯ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಎರಡನೇ ಹಂತದ ವಿಚಾರಣೆ!

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ವೀಣಾ. ಟಿ ಅವರನ್ನು ಜೂನ್​ 17 ರಂದು ಜಾರಿ ನಿರ್ದೇಶನಾಲಯ ಸುಮಾರು ಒಂಭತ್ತು ಗಂಟೆಗಳ ನಿರಂತರ ವಿಚಾರಣೆಯನ್ನು ನಡೆಸಿ, ಜೂನ್ 19 ರಂದು ಅವರ ಎಲ್ಲಾ ಬ್ಯಾಂಕ್​ ಖಾತೆಗಳನ್ನು ಫ್ರೀಜ್​ ಮಾಡಿತ್ತು.
ದೂರಿನ ಪ್ರಕಾರ, 2.78 ಕೋಟಿ ಹಣವನ್ನು ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL) ಕಂಪನಿ ಯಾವುದೇ ಸೇವೆಯನ್ನು ನೀಡದೆ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಪಡೆದುಕೊಂಡಿರುವ ಹಿನ್ನಲೆ ಈ ಪ್ರಕರಣ ದಾಖಲಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದ್ದು, ಈಗ ಎರಡನೇ ಹಂತದ ವಿಚಾರಣೆಗಾಗಿ ವೀಣಾ ಅವರಿಗೆ ಮತ್ತೊಮ್ಮೆ ಸಮನ್ಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

130 ಕೋಟಿ ಅಕ್ರಮದ ಆರೋಪ!

2019 ರಲ್ಲಿ ವೀಣಾ ಮಾಲೀಕತ್ವದ ಈ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL) ಕಂಪನಿ ಆರ್ಥಿಕ ವಂಚನೆಯಲ್ಲಿ ತೊಡಗಿರುವುದು ಕಂಡುಬಂದಿದ್ದು, ಸುಮಾರು 130 ಕೋಟಿ ಹಣವನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂಬ ಆರೋಪ ಆ ಸಮಯದಲ್ಲಿ ಕೇಳಿಬಂದಿತ್ತು.
ನಂತರದ ದಿನಗಳಲ್ಲಿ ಜಾರಿ ನಿರ್ದೇಶನಾಲಯ ವೀಣಾ ಅವರ ಕಂಪನಿಯ ಹಿಂದೆ ಬಿದ್ದಿದ್ದು, ನಿರಂತರ ಆರೋಪಗಳು ಕೇಳಿಬಂದ ಹಿನ್ನಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net