ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರದ ಫಲಿತಾಂಶ ಮತ್ತು ಮಹಾಘಟಬಂಧನ್‌ನ ಸೋಲಿಗೆ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ನಡೆಸಿದ ಚುನಾವಣಾ ಪೂರ್ವ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರಣ ಎಂದಿದ್ದು, ಬಿಹಾರದಲ್ಲಿ ಎಸ್‌ಐಆರ್ ಆಡಿದ ಆಟ ಇನ್ನು ಮುಂದೆ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ ಅಥವಾ ಬೇರೆಡೆ ಸಾಧ್ಯವಾಗುವುದಿಲ್ಲ. ಯಾಕಂದರೆ ಈಗ ಪಿತೂರಿ ಬಹಿರಂಗಗೊಂಡಿದೆ.