12 ರಾಜ್ಯಗಳ ಎಸ್​ಐಆರ್ ಅವಧಿ ಒಂದು ವಾರ ವಿಸ್ತರಿಸಿದ ಚುನಾವಣೆ ಆಯೋಗ; ಅಂತಿಮ ಪಟ್ಟಿ ಫೆ. 14ರಂದು ಬಿಡುಗಡೆ | Election Commission

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು(SIR) ಅನ್ನು ಭಾರತೀಯ ಚುನಾವಣೆ ಆಯೋಗ(Election Commission) ಒಂದು ವಾರ ವಿಸ್ತರಣೆ ಮಾಡಿದ್ದು, ಫೆ. 14ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಚುನಾವಣಾ ಆಯೋಗವು ಇಂದು(ನ. 30) ಹೊರಡಿಸಿದ ಮೂರು ಪುಟಗಳ ಆದೇಶದಲ್ಲಿ, ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಅಧಿಕಾರಿಗಳಿಗೆ ಇನ್ನೂ ಒಂದು ವಾರದ ಅವಕಾಶ ನೀಡಿದೆ. ವಿಶೇಷ ಪರಿಷ್ಕರಣೆ ಅವಧಿ ಡಿ. 04ಕ್ಕೆ ಮುಕ್ತಾಯವಾಗುವ ಬದಲು ಡಿ. 11ರಂದು ಕೊನೆಗೊಳ್ಳುತ್ತದೆ ಎಂದು ಹೇಳಿದೆ.
ಡಿ. 9ರಂದು ಬಿಡುಗಡೆಯಾಗಬೇಕಿದ್ದ ಕರಡು ಮತದಾರರ ಪಟ್ಟಿಯನ್ನು ಡಿ. 16ರಂದು ಪ್ರಕಟಿಸಲಾಗುವುದು. ಮತ್ತು ಅಂತಿಮ ಪಟ್ಟಿಯನ್ನು ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದು ಆಯೋಗ ಆದೇಶದಲ್ಲಿ ಉಲ್ಲೇಖಿಸಿದೆ. 
ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಈ ವಾರ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಎಸ್‌ಐಆರ್ ಪ್ರಕ್ರಿಯೆಯನ್ನು ಮರು ನಿಗದಿಪಡಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಉತ್ತಮ ರೀತಿಯಲ್ಲಿ ಆಯೋಜಿಸುವಂತೆ ಮನವಿ ಮಾಡಿದ್ದವು.  ಜೊತೆಗೆ 
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆಯಿಂದ ಮನೆಗೆ ತೆರಳಿ ಬೃಹತ್ ಕಾರ್ಯವನ್ನು ಅಲ್ಪಾವಧಿಯಲ್ಲಿ ಮಾಡಲಾಗಲ್ಲ, ಅವರ ಮೇಲೆ ಒತ್ತಡವಿದೆ. ಹೀಗಾಗಿ ಹಲವರು ಒತ್ತಡದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮಧ್ಯೆ ಆಯೋಗ ಒಂದು ವಾರ ವಿಸ್ತರಣೆ ಮಾಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net