ಸಿಜೆಪಿಯ ಹಾದಿ ಹಿಡಿದಿರುವ ಇಜೆಪಿ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಪಕ್ಷ ಕಟ್ಟಿರುವುದಾಗಿ ಹೇಳಿಕೊಂಡಿದೆ. ಇದು ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ಇ20 ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಖಾತೆಯೊಂದು ಓಪನ್ ಆಗಿದ್ದು, ಸದ್ಯ 34 ಸಾವಿರ ಮಂದಿ ಅದಾಗಲೇ ಫಾಲೋವರ್ಸ್ ಸಂಖ್ಯೆಗೆ ಸೇರ್ಪಡೆಯಾಗಿದ್ದಾರೆ. ಕೆಲವೇ ಸಮಯದಲ್ಲಿ ಯುವಕರು ಪಕ್ಷ ಸೇರಿಕೊಳ್ಳುತ್ತಿದ್ದು, ಇದೇ ಜುಲೈ 31ರಂದು ದೆಹಲಿಯಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.