ಬಾರಾಮತಿಯ 'ದಾದಾ' ಅಜಿತ್ ಪವಾರ್​​ಗೆ ನಾಳೆ ಅಂತಿಮ ನಮನ! ಮಹಾರಾಷ್ಟ್ರದಲ್ಲಿ 3 ದಿನಗಳ ಕಾಲ ರಾಜ್ಯ ಶೋಕಾಚರಣೆ.. Ajit Pawar

Ajit Pawar
Ajit Pawar
Published on

ಪ್ರಮುಖ ಮುಖ್ಯಾಂಶಗಳು

  • ಅಜಿತ್ ಪವಾರ್ ಅಂತ್ಯಕ್ರಿಯೆ ನಾಳೆ
  • ಮಹಾರಾಷ್ಟ್ರ ಸರ್ಕಾರದಿಂದ 3 ದಿನಗಳ ರಾಜ್ಯ ಶೋಕಾಚರಣೆ
ಮಹರಾಷ್ಟ್ರ:   ( Ajit Pawar) ವಿಮಾನ ದುರಂತದಲ್ಲಿ ಮೃತಪಟ್ಟ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಗಂಟೆಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದಲ್ಲಿ ನಡೆಯಲಿದೆ ಎನ್ನಲಾಗಿದೆ. 
ಪವಾರ್ ಕುಟುಂಬದ ಶೈಕ್ಷಣಿಕ ಪರಂಪರೆಗೆ ನಿಕಟ ಸಂಬಂಧ ಹೊಂದಿರುವ ವಿದ್ಯಾ ಪ್ರತಿಷ್ಠಾನವು ಈ ಅಂತಿಮ ಸಾರ್ವಜನಿಕ ಗೌರವಾರ್ಪಣೆಗೆ ಸ್ಥಳವಾಗಲಿದೆ. 
ಅಜಿತ್ ಪವಾರ್ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಗಂಟೆಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದಲ್ಲಿ ನಡೆಯಲಿದ್ದು, ಅವರ ನಿಧನದ ನಂತರ ಮಹಾರಾಷ್ಟ್ರದಲ್ಲಿ ಮೂರು ದಿನಗಳ ರಾಜ್ಯ ಶೋಕಾಚರಣೆ ಘೋಷಿಸಲಾಗಿದೆ ಎನ್ನುವ ಮಾಹಿತಿಯನ್ನು ನ್ಯಾಷನಲ್​ ಮೀಡಿಯಾಗಳು ವರದಿ ಮಾಡಿವೆ.
ಅಜಿತ್ ಪವಾರ್ ಅವರು ಹಾಲಿ ಉಪಮುಖ್ಯಮಂತ್ರಿಯಾಗಿದ್ದ ಕಾರಣ, ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಪೊಲೀಸರಿಂದ ಗನ್ ಸಲ್ಯೂಟ್ ಕೂಡ ನೀಡಲಾಗುವುದು.  
ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಶರದ್ ಪವಾರ್ ಹಾಗೂ ವಿವಿಧ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.  
ಬಾರಾಮತಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರುವ ನಿರೀಕ್ಷೆಯಿರುವುದರಿಂದ ಅತೀ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಅತಿ ಹೆಚ್ಚು ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದರು. ಅವರು ವಿವಿಧ ಸರ್ಕಾರಗಳಲ್ಲಿ ಆರು ಅವಧಿಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸಚಿವ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.
ಅಜಿತ್ ಪವಾರ್ ಜೊತೆ ವಿಮಾನದಲ್ಲಿ ಯಾರಿದ್ದರು?
ಅಜಿತ್ ಪವಾರ್, ಉಪಮುಖ್ಯಮಂತ್ರಿ
ವಿಂದೀಪ್ ಜಾಧವ್ - ಅಂಗರಕ್ಷಕ
ಪಿಂಕಿ ಮಾಲಿ - ಕ್ಯಾಬಿನ್ ಸಿಬ್ಬಂದಿ
ಸುಮಿತ್ ಕಪೂರ್
ಕ್ಯಾಪ್ಟನ್​ ಆಗಿ ಆಗಿ ಶಾಂಭವಿ ಪಾಟೀಲ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net