ಹೆಂಡತಿ ವಿಚಾರಕ್ಕೆ ಬಾರ್‌ನಲ್ಲಿ ನಡೀತು ಮಾರಾಮಾರಿ! ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು Bar Fight

 Bar Fight ಸಾಂದರ್ಭಿಕ ಚಿತ್ರ
Bar Fight ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬೇರೊಬ್ಬ ವ್ಯಕ್ತಿ
  • ಬಾರ್​ನಲ್ಲಿ ದಂಪತಿ ಪೂಲ್ ಟೇಬಲ್​ ಆಟವನ್ನು ಆಡುತ್ತಿರುವುದನ್ನು ಗಮನಿಸಬಹುದು
  • ಕುಡಿದ ಮತ್ತಿನಲ್ಲಿದ್ದ ಪುರುಷನೊಬ್ಬ ಮಹಿಳೆಯ ಬಳಿಗೆ ಬಂದು ಅನುಚಿತವಾಗಿ ಸ್ಪರ್ಶಿಸಿದ್ದಾನೆ
  • ಕೋಪಗೊಂಡ ಪತಿಯಿಂದ ಆ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್​
ನವದೆಹಲಿ: ಕುಡಿದ ಮತ್ತಿನಲ್ಲಿ ತನ್ನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದನೆಂಬ ಆಕ್ರೋಶಕ್ಕೆ ವ್ಯಕ್ತಿಯೊಬ್ಬ ಗ್ರಾಹಕನಿಗೆ ಬಾರ್‌ನಲ್ಲೇ (Bar Fight) ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿವೆ.

ವೈರಲ್​ ಆದ ವಿಡಿಯೋದಲ್ಲೇನಿದೆ?

ವೈರಲ್​ ಆದ ವಿಡಿಯೋದಲ್ಲಿ, ಬಾರ್​ನಲ್ಲಿ ದಂಪತಿ ಪೂಲ್ ಟೇಬಲ್​ ಆಟವನ್ನು ಆಡುತ್ತಿರುವುದನ್ನು ಗಮನಿಸಬಹುದು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಪುರುಷನೊಬ್ಬ ಮಹಿಳೆಯ ಬಳಿಗೆ ಬಂದು ಅನುಚಿತವಾಗಿ ಸ್ಪರ್ಶಿಸುವುದನ್ನು ತೋರಿಸಲಾಗಿದೆ.
ಈ ಘಟನೆಯಿಂದ ಕೋಪಗೊಂಡ ಪತಿ ನೇರವಾಗಿ ಆ ವ್ಯಕ್ತಿಯ ಕಡೆಗೆ ಧಾವಿಸಿ ತನ್ನ ಮುಷ್ಟಿಯಿಂದ ಆತನ ಮುಖಕ್ಕೆ ಗುದ್ದಿದ್ದಾನೆ. ಹೊಡೆತವನ್ನು ತಡೆಯಲಾರದೇ ಆ ವ್ಯಕ್ತಿ ಅಲ್ಲಿಯೇ ಕುಸಿದು ಬೀಳುತ್ತಾನೆ. ಇದಾದ ಬಳಿಕ ಅಲ್ಲಿರುವ ಸಿಬ್ಬಂದಿ ಪತಿಯನ್ನು ಆವರಣದಿಂದ ಹೊರಹೋಗುವಂತೆ ಕೇಳುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಮಿಶ್ರ ಪ್ರತಿಕ್ರಿಯೆಯನ್ನು ಹುಟ್ಟು ಹಾಕಿತು. ಕೆಲವು ಬಳಕೆದಾರರು ಅನ್ಯ ವ್ಯಕ್ತಿಯಿಂದ ಪತ್ನಿಯನ್ನು ರಕ್ಷಿಸಿದ ಪತಿಯ ಕೃತ್ಯಗಳು ಸಮರ್ಥನೀಯವಾಗಿದೆ ಎಂದು ಕಾಮೆಂಟ್​ ಮಾಡಿದರೆ, ಇನ್ನೂ ಕೆಲವರು ಹಿಂಸಾಚಾರವಲ್ಲದ ವಿಧಾನವನ್ನು ಬಳಸಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಆದಾಗ್ಯೂ, ಈ ರೀತಿಯ ಬಲಪ್ರಯೋಗವನ್ನು ಮಾಡುವುದರಿಂದ ಎದುರಾಳಿ ಮೇಲೆ ತುಂಬಾ ಗಂಭೀರವಾಗಿ ಪರಿಣಾಮ ಬೀರಬಹುದು. ಇಂತಹ ಕೃತ್ಯಗಳಿಗೆ ಪ್ರಚೋದನೆಯನ್ನು ನೀಡಬಾರದು ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷ ಹಳೆಯದು ಎನ್ನಲಾದ ಈ ವಿಡಿಯೋ ಮತ್ತೆ ವೈರಲ್​ ಆಗುತ್ತಿರುವುದು ಸಮಾಜಕ್ಕೆ ಒಂದು ಎಚ್ಚರಿಕೆ ಗಂಟೆಯಾಗಿದೆ. ಆದಾಗ್ಯೂ, ಮದ್ಯದ ಅಮಲಿನಲ್ಲಿ ಸಭ್ಯತೆಯನ್ನು ಮರೆಯುವವರಿಗೆ ಕಾನೂನಿನ ಭಯವಿರಬೇಕು. ಅದೇ ರೀತಿ, ಬಾರ್ ಮತ್ತು ರೆಸ್ಟೋರೆಂಟ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿರಬೇಕು ಎಂಬ ಅಭಿಪ್ರಾಯವನ್ನು ನೀಡುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net